Home ಅಪರಾಧ ಭೀಕರ ಅಪಘಾತ: ಐವರು ಸಾವು

ಭೀಕರ ಅಪಘಾತ: ಐವರು ಸಾವು

0

ಚಿತ್ರದುರ್ಗ: ತಾಲೂಕಿನ ತಮಟಕಲ್ಲು ಬಳಿ ರಾ.ಹೆ. ೪೮ರಲ್ಲಿ ನಿಂತಿದ್ದ ಲಾರಿಗೆ ಇನೊವಾ ಕಾರು ಡಿಕ್ಕಿ ಹೊಡೆದಿದ್ದು, ಐವರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಮೂಲದ ಶಾಂತಮೂರ್ತಿ, ಮಲ್ಲಿಕಾರ್ಜುನ, ರುದ್ರಸ್ವಾಮಿ, ಚಂದ್ರಹಾಸ್, ಶ್ರೀನಿವಾಸ್ ಮೃತರು. ಚಿದಂಬರಾಚಾರ್ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಲ್ಲಿ ಬನಶಂಕರಿ ದೇಗುಲದ ಪ್ರಸಾದ ಪತ್ತೆ ಆಗಿದ್ದು, ಹಿರಿಯ ಗೆಳೆಯರೆಲ್ಲ ಸೇರಿ ಬೆಂಗಳೂರಿ ನಿಂದ ಟ್ರಿಪ್ ಹೋಗಿದ್ದರು. ಬಾದಾಮಿ ಬನಶಂಕರಿ ದೇಗುಲಕ್ಕೆ ಹೋಗಿ ದೇವರ ದರ್ಶನ ಪಡೆದುಕೊಂಡು ಬೆಂಗಳೂರಿಗೆ ಹಿಂತಿರುಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ.
ಭಾನುವಾರ ಬೆಳಗ್ಗೆ ಅಂದಾಜು ೧೧.೩೦ಕ್ಕೆ ರಸ್ತೆಯ ಎಡಬದಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಇನೊವಾ ಕಾರು ಡಿಕ್ಕಿಯಾಗಿದ್ದು, ಅಪಘಾತ ಸ್ಥಳ ನೋಡಿದರೆ ಕಾರು ಬ್ರೇಕ್ ಬಳಸಿದಂತೆ ಕಾಣುತ್ತಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲಿ ಸಿದರು. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version