Home ತಾಜಾ ಸುದ್ದಿ ಬ್ರದರ್ ಮಾಡಿಲ್ಲ ಎಂದಿದ್ದರು…

ಬ್ರದರ್ ಮಾಡಿಲ್ಲ ಎಂದಿದ್ದರು…

0

ವಿಜಯಪುರ: ಕುಕ್ಕರ್ ಬ್ಲಾಸ್ಟ್ ಆದಾಗ ಬ್ರದರ್ ಮಾಡಿಲ್ಲ ಎಂದಿದ್ದರು. ಇದೀಗ ಕುಕ್ಕರ್ ಬ್ಲಾಸ್ಟ್ ಹಾಗೂ ರಾಮೇಶ್ವರ ಕೆಫೆ ಸ್ಫೋಟಕ್ಕೆ ಸಾಮ್ಯತೆ ಇದೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.
ವಿಜಯಪುರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿರುವ ಅವರು ದೇಶದಲ್ಲಿ ಅಸ್ಥಿರತೆ ಹಾಗೂ ಭಯ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಬಾಂಬ್ ಸ್ಫೋಟ ಮಾಡಲಾಗಿದೆ. ಪ್ರಕರಣದ ಕುರಿತು ಎನ್‌ಐಎ ತನಿಖೆ ನಡೆಸುತ್ತಿದ್ದು, ಸತ್ಯ ಹೊರಬರಲಿದೆ,
ದೇಶದ ಆಂತರಿಕ ಭದ್ರತೆಯಂಧ ಗಂಭೀರ ವಿಷಯದಲ್ಲಿ ಬಾಂಬ್ ಸ್ಫೋಟ್ ಪ್ರಕರಣಗಳು ಸಂಭವಿಸಿದಾಗ ತನಿಖೆ ನಡೆಸುವಲ್ಲಿ ರಾಜ್ಯ ಸರ್ಕಾರ ತನಿಖೆಗೆ ಹಸ್ತಕ್ಷೇಪ ಮಾಡಬಾರದು ಎಂದರು.

Exit mobile version