Home News ಬೈಕ್ ವೀಲಿಂಗ್: ಪ್ರಕರಣ ದಾಖಲು

ಬೈಕ್ ವೀಲಿಂಗ್: ಪ್ರಕರಣ ದಾಖಲು

ಮಂಡ್ಯ: ನಗರದ ಹೊರವಲಯದ ಶ್ರೀನಿವಾಸಪುರ ಗೇಟ್ ಬಳಿ ಬೈಕ್ ವೀಲಿಂಗ್ ಮಾಡಿದ್ದ ಯುವಕನ ವಿರುದ್ದ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ‌‌.
ಠಾಣೆಯ ಪೊಲೀಸ್ ಸಿಬ್ಬಂದಿ ಪ್ರಕಾಶ್ ಯರಗಟ್ಟಿ ಈ ಕುರಿತು ಆರೋಪಿ ಗುತ್ತಲು ಬಡಾವಣೆಯ ಸಾದಿಕ್ ಷರೀಪ್ ಎಂಬುವವರ ವಿರುದ್ದ ದೂರು ದಾಖಲಿಸಿದ್ದು ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಎಸ್ಪಿ ಕಚೇರಿ ಮಾಹಿತಿ ನೀಡಿದೆ‌‌.
ಕಳೆದ 15 ದಿನ ಹಿಂದೆ ಶ್ರೀನಿವಾಸಪುರ ಗೇಟ್ ಬಳಿಯ ಅಂಡರ್ ಪಾಸ್’ನಿಂದ ಯುವಕನೊಬ್ಬ ನೋಂದಣಿ ಸಂಖ್ಯೆ ಇಲ್ಲದ ಸುಜುಕಿ ಸಮುರೈ ಬೈಕ್’ನ್ನು ಹೆಲ್ಮೆಟ್ ಧರಿಸದೇ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ವೀಲಿಂಗ್ ಮಾಡಿರುವುದು ಚಿತ್ರೀಕರಣವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು‌. ಹಾಗಾಗಿ ಆತನ ವಿರುದ್ದ ಕಾನೂನು ಕ್ರಮ ಜರುಗಿಸಲು ಮನವಿ ಮಾಡಲಾಗಿತ್ತು.

Exit mobile version