Home ಅಪರಾಧ ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಕೊಲೆ

ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಕೊಲೆ

0

ಮಾಜಿ‌ ಶಾಸಕನನ್ನ ಬರ್ಬರವಾಗಿ ಹತ್ಯೆಗೈದ ಆಟೋ ಚಾಲಕ

ಬೆಳಗಾವಿ : ಗೋವಾದ ಮಾಜಿ ಶಾಸಕರೊಬ್ಬರನ್ನು ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಶನಿವಾರ ನಡೆದಿದೆ.
ಬೆಳಗಾವಿಯ ಖಡೇಬಜಾರ್ ಮಾರುಕಟ್ಟೆಯ ಶ್ರೀನಿವಾಸ ವಸತಿ ಗೃಹ ಬಳಿ (ಲಾಡ್ಜ್) ಈ ಘಟನೆ ನಡೆದಿದೆ. ಅಟೊ ಚಾಲಕ ಹಾಗೂ ಗೋವಾ ರಾಜ್ಯದ ಮಾಜಿ ಶಾಸಕ ಲಾವು ಮಾಮಲೇದಾರ(69) ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದು ಕೊನೆಯಲ್ಲಿ ಅಟೋ ಚಾಲಕ ಗೋವಾ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಗೋವಾ ಮಾಜಿ ಶಾಸಕ ಕುಸಿದು ಬಿದ್ದು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೂ ಮಾಮಲೇದಾರ್. ಖಡೇಬಜಾರ್ ಬಳಿ ಮಾಜಿ ಶಾಸಕರ ಕಾರು ಆಟೋಗೆ ಟಚ್ ಆದ ಹಿನ್ನೆಲೆ ಜಗಳ ಶುರುವಾಗಿದೆ. ಬಳಿಕ ಶ್ರೀನಿವಾಸ ಲಾಡ್ಜ್ ಕಡೆಗೆ ಬಂದಿದ್ದ ಲಾವೂ ಮಾಮಲೇದಾರ್. ಆಗ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಆಟೋ ಚಾಲಕನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಗೆ ಸ್ಥಳದಲ್ಲೇ ಕುಸಿದು ಬಿದ್ದ ಲಾವೂ ಮಾಮಲೇದಾರ್ ಕೊನೆಯುಸಿರೆಳೆದಿದ್ದಾರೆ. ಮೃತ ದೇಹ ಬೆಳಗಾವಿ ಬಿಮ್ಸ್‌ಗೆ ರವಾನೆ ಮಾಡಲಾಗಿದೆ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಮಾರ್ಕೆಟ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Exit mobile version