Home ಅಪರಾಧ ಭೀಕರ ಅಪಘಾತ: ಸ್ಥಳದಲ್ಲಿಯೇ ಮೂವರ ಸಾವು

ಭೀಕರ ಅಪಘಾತ: ಸ್ಥಳದಲ್ಲಿಯೇ ಮೂವರ ಸಾವು

0
ಅಳ್ನಾವರ ಸಮೀಪದಲ್ಲಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ವಾಹನಗಳು

ಅಳ್ನಾವರ: ಎರಡು ವಾಹನಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಹತ್ತಿರ ಧಾರವಾಡ-ಗೋವಾ ಹೆದ್ದಾರಿಯಲ್ಲಿ ಸಂಭವಿಸಿದೆ.

ಗೋವಾ ಕಡೆಯಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಟಿ ಟಿ ವಾಹನ ಮತ್ತು ಸವದತ್ತಿಯ ಶಿರಸಿಂಗಿಯಿಂದ ಗೋವಾಕ್ಕೆ ತೆರಳುತ್ತಿದ್ದ ಕ್ಯಾಂಟರ ವಾಹನದ ನಡುವೆ ಅಪಘಾತ ಸಂಭವಿಸಿದ್ದು ಕ್ಯಾಂಟರದಲ್ಲಿದ್ದ ಹನುಮಂತ ಮಲ್ಲಾಡ (೩೬) ಮಹಾಂತೇಶ ಚವ್ಹಾಣ (೩೫) ಹಾಗೂ ಮಹಾದೇವಪ್ಪ ಹಾಲೊಳ್ಳಿ (೩೫) ಎಂಬುವವರು ಸ್ಥಳದಲ್ಲಿಯೇ ಮೃತರಾಗಿದ್ದು ತೀವ್ರವಾಗಿ ಗಾಯಗೊಂಡಿರುವ ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಿರುವಿನಲ್ಲಿ ಪಲ್ಟಿಯಾದ ಕ್ಯಾಂಟರ್ ವಾಹನ ಎದುರಿನಿಂದ ಬರುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ. ಇದರಲ್ಲಿದ್ದ ಪ್ರವಾಸಿಗರಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರವಾಡ ಎಸ್ ಪಿ ಗೋಪಾಲ ಬ್ಯಾಕೋಡ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಸಿಪಿಐ ಸಮೀರ ಮುಲ್ಲಾ ಪಿಎಸ್‌ಐ ಪ್ರವೀಣ ನೆಸರಗಿ ಸ್ಥಳದಲಿದ್ದು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Exit mobile version