ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸವದತ್ತಿ ತಾಲ್ಲೂಕಿನಹಲಕಿ ತಾಂಡಾದ ಕಲ್ಪನಾ ಲಮಾಣಿ (೨೦) ಮೃತ ಬಾಣಂತಿ.
ಲೋ ಬಿಪಿಯಿಂದ ಕಲ್ಪನಾ ಸಾವನ್ನಪ್ಪಿದ್ದಾಗಿ ವೈದ್ಯರು ಹೇಳಿದ್ದಾರೆ. ಆದರೆ ವೈದ್ಯರ ನಿರ್ಲಕ್ಷ್ಯವೆ ಕಾರಣ ಎಂದು ಆರೋಪಿಸಿ ಹಲಕಿ ತಾಂಡಾದ ಕುಟುಂಬಸ್ಥರು ಬಿಮ್ಸ್ ಹೆರಿಗೆ ವಾರ್ಡಿನ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
