Home ಅಪರಾಧ ಬಸ್ ಪಲ್ಟಿ: ಚಾಲಕ ಸಾವು, ಹಲವು ಪ್ರಯಾಣಿಕರಿಗೆ ಗಾಯ

ಬಸ್ ಪಲ್ಟಿ: ಚಾಲಕ ಸಾವು, ಹಲವು ಪ್ರಯಾಣಿಕರಿಗೆ ಗಾಯ

0

ಕುಷ್ಟಗಿ: ಬಾಗಲಕೋಟೆಯಿಂದ ಬೆಂಗಳೂರಿಗೆ ಕಡೆಗೆ ಹೊರಟಿದ್ದ ಸ್ಲಿಪ್ಪರ್ ಕೋಚ್ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕುಷ್ಟಗಿಯ ೩ ಕಿ.ಮಿ.ಹತ್ತಿರದ ತಾಯಮ್ಮನ ಗುಡಿ ಬಳಿ ಬಸ್ ಪಲ್ಟಿಯಾದ ಪರಿಣಾಮವಾಗಿ ಸ್ಥಳದಲ್ಲಿ ಚಾಲಕ ಸಾವನಪ್ಪಿದರೆ.ಇನ್ನುಳಿದಂತೆ ಬಸ್ಸಿನಲ್ಲಿದ್ದ 22 ಪ್ರಯಾಣಿಕರಿಗೆ ಗಾಯವಾದ ಘಟನೆ ಸಂಭವಿಸಿದೆ.

ಕುಷ್ಟಗಿ- ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ -50ರ ಪೆಟ್ರೋಲ್ ಬಂಕ್ ವೊಂದರ ಹತ್ತಿರ ಈ ಘಟನೆ ನಡೆದಿದೆ.ಬಾಗಲಕೋಟೆ ಜಿಲ್ಲೆಯ ಅರಕೇರಿ ಗ್ರಾಮದ ಲಕ್ಷ್ಮಣ (32) ಸ್ಥಳದಲ್ಲಿ ಸಾವನಪ್ಪಿದ್ದಾನೆ.ಬಸ್‌ ಬಾಗಲಕೋಟೆಯಿಂದ ಬೆಂಗಳೂರಿಗೆ ತೆರಳುವಾಗ ಕುಷ್ಟಗಿಯಿಂದ 3 ಕಿ.ಮೀ. ಅಂತರದ ಪೆಟ್ರೋಲ್ ಬಂಕ್ ತಾಯಮ್ಮನ ಗುಡಿ ಬಳಿ ಜು.4ರ ಗುರುವಾರ ತಡರಾತ್ರಿ 11-12 ಗಂಟೆ ಸುಮಾರಿಗೆ ಈ ದುರಂತ ಜರುಗಿದೆ.

ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ ಚಾಲನೆಯಿಂದ ಬಸ್ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಡಿವೈಡರ ತಡೆ ಗೋಡೆಗೆ ಡಿಕ್ಕಿಯಾದ ಪರಿಣಾಮ ಪಲ್ಟಿಯಾಗಿದೆ ತಿಳಿದುಬಂದಿದೆ.
ಬಸ್‌ ಚಾಲಕ ಮೃತಪಟ್ಟಿದ್ದು, ಇನ್ನುಳಿದಂತೆ ಬಸ್ ನಲ್ಲಿದ್ದ 22 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.ಕುಷ್ಟಗಿಯ ಸಿಪಿಐ‌ ಯಶವಂತ ಬಿಸನಳ್ಳಿ, ಪಿಎಸೈ ಮುದ್ದುರಂಗಸ್ವಾಮಿ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

Exit mobile version