Home ತಾಜಾ ಸುದ್ದಿ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ ಚಾಲಕ: ಪ್ರಯಾಣಿಕರು ಗರಂ

ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ ಚಾಲಕ: ಪ್ರಯಾಣಿಕರು ಗರಂ

0

ಹುಬ್ಬಳ್ಳಿ: ಪ್ರಯಾಣಿಕರಿದ್ದ ಬಸ್​ ನಿಲ್ಲಿಸಿ ಸಾರಿಗೆ ಸಂಸ್ಥೆಯ ಚಾಲಕನೊಬ್ಬ ನಮಾಜ್‌ ಮಾಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹುಬ್ಬಳ್ಳಿ-ವಿಶಾಲಗಡ್ ಮಧ್ಯೆ ಸಂಚರಿಸುತ್ತಿದ್ದ ಹಾನಗಲ್‌ ಘಟಕದ (ಕೆಎ-27 ಎಫ್‌ 0914) ಬಸ್‌ನಲ್ಲಿ ಚಾಲಕ ತನ್ನ ಹಿಂಬದಿ ಸೀಟಿನಲ್ಲಿ ಕುಳಿತು ನಮಾಜ್‌ ಮಾಡುತ್ತಿದ್ದ ವೇಳೆ ಪ್ರಯಾಣಿಕರೊಬ್ಬರು ಅದನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಚಾಲಕನ ಈ ನಡೆ ಸರಿಯಲ್ಲ ಎಂದು ಸಾಕಷ್ಟು ಜನ ಕಮೆಂಟ್‌ ಮಾಡಿದ್ದಾರೆ.

ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ ಚಾಲಕ: ಪ್ರಯಾಣಿಕರು ಗರಂ

Exit mobile version