Home ಅಪರಾಧ ಬಳ್ಳಾರಿ ಜೈಲು ಸುತ್ತಲೂ ಬಿಗಿ ಭದ್ರತೆ

ಬಳ್ಳಾರಿ ಜೈಲು ಸುತ್ತಲೂ ಬಿಗಿ ಭದ್ರತೆ

0

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ‌ನಟ ದರ್ಶನ್ ಬಳ್ಳಾರಿ ‌ಜೈಲಿಗೆ ಶಿಫ್ಟ್ ಮಾಡುವ ಹಿನ್ನೆಲೆಯಲ್ಲಿ ಕಾರಗೃಹ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಜೈಲು ಪ್ರವೇಶ ದ್ವಾರಕ್ಕೆ ಸಂಪರ್ಕ ಕಲ್ಪಿಸುವ ವಾಲ್ಮೀಕಿ ವೃತ್ತ, ದುರ್ಗಮ್ಮ ದೇವಸ್ಥಾನದ ಮೂಲಕ ಬರುವ ಮಾರ್ಗದ ರಸ್ತೆಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ೧೬ ಎಕರೆ ಪ್ರದೇಶದಲ್ಲಿ ಇರುವ ಜೈಲು ಸುತ್ತಲೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಜೈಲು ಪ್ರವೇಶ ದ್ವಾರದಲ್ಲೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Exit mobile version