Home ಅಪರಾಧ ಬಳ್ಳಾರಿ ಜೈಲು ಮುಂದೆ ಜಮಾಯಿಸಿದ ದರ್ಶನ್ ಅಭಿಮಾನಿಗಳು

ಬಳ್ಳಾರಿ ಜೈಲು ಮುಂದೆ ಜಮಾಯಿಸಿದ ದರ್ಶನ್ ಅಭಿಮಾನಿಗಳು

0

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪಿ, ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡುವ ಸುದ್ದಿ ಕೇಳಿ ಅವರ ನೂರಾರು ಅಭಿಮಾನಿಗಳು ಜೈಲು ಮುಂದೆ ಜಮಾಯಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿರುವ ಅಭಿಮಾನಿಗಳು ಜೈಲು ಪ್ರವೇಶ ದ್ವಾರದ ಮುಂದೆಯೇ ನಿಂತು ದರ್ಶನ್ ಬರುವಿಕೆಗಾಗಿ ಕಾಯುತ್ತಿದ್ದಾರೆ‌. ಕಾರಗೃಹ ಪ್ರವೇಶ ಮಾರ್ಗದ ಎರಡು ರಸ್ತೆಗಳನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಿದ್ದರೂ, ವಾಹನಗಳನ್ನು ಬಿಟ್ಟು ಒಂದು ಕಿ.ಮೀ.ವರೆಗೆ ನಡೆದುಕೊಂಡು ಬಂದು ಜಮಾಯಿಸಿದ್ದಾರೆ. ಸ್ವತಃ ಎಸ್ಪಿ‌ ಡಾ.ಶೋಭರಾಣಿ‌ ಸೇರಿ ಇತರೆ ಸಿಪಿಐ ಸೇರಿ ಪೋಲೀಸ್ ಸಿಬ್ಬಂದಿಗಳು ಅಭಿಮಾನಿಗಳನ್ನು ಚದುರಿಸುವ ಪ್ರಯತ್ನ ಮಾಡಿದರೂ ಅಭಿಮಾನಿಗಳು ಜಾಗ ಕದಲಿಲ್ಲ.
ಮಾಧ್ಯಮಗಳ ಮುಂದೆ ಮಾತನಾಡಿದ ಅಭಿಮಾನಿಗಳು ದರ್ಶನ್ ಎಲ್ಲಿದ್ದರೂ ನಮಗೆಲ್ಲ ಡಿ‌ಬಾಸ್. ಅವರನ್ನು ‌ಬೇರೆಯದ್ದೇ ರೀತಿಯಾಗಿ ಬರಮಾಡಿಕೊಳ್ಳಬೇಕಿತ್ತು. ಆದರೆ ಜೈಲಿಗೆ ಬರುವುದನ್ನು ನೋಡಬೇಲಾಗಿದೆ ಎಂದು ಹೇಳಿದರು.

ಬಳ್ಳಾರಿ ಜೈಲು ಬಳಿ ದರ್ಶನ್ ಅಭಿಮಾನಿಗಳ ದಂಡು

Exit mobile version