Home ತಾಜಾ ಸುದ್ದಿ ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಐಟಿ ಡ್ರಿಲ್

ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಐಟಿ ಡ್ರಿಲ್

0

ಬಳ್ಳಾರಿ: ಬಳ್ಳಾರಿ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ಬಂಧಿಯಾಗಿರುವ ನಟ ದರ್ಶನನ್ನು ಐಟಿ‌ ಅಧಿಕಾರಿಗಳು ಗುರುವಾರ ವಿಚಾರಣೆಗೆ ಒಳಪಡಿಸಿದರು.
ಆದಾಯ ತೆರಿಗೆ ಇಲಾಖೆಯ ಅಡಿಟರ್ಸ್ ಗಳಾದ ಎಂ.ಆರ್.ರಾವ್, ಅರುಣ್ ಬೆಳಗ್ಗೆ ೧೧ ಗಂಟೆಗೆ ಜೈಲಿಗೆ ಆಗಮಿಸಿದರು. ೧೧.೩೨ ಕ್ಕೆ ಐಟಿ‌ ಇಲಾಖೆಯ ಐವರು ಅಧಿಕಾರಿಗಳನ್ನೊಳಗೊಂಡ ತಂಡ ಆಗಮಿಸಿತು. ಐಟಿ ಅಧಿಕಾರಿಗಳು ಆಗಮಿಸಿ ವಿಚಾರಣೆಗೆ ಪೂರ್ವ ಸಿದ್ದತೆ ಮಾಡಿಕೊಂಡ ಬಳಿಕ ೧೨.೨೦ ನಿಮಿಷಕ್ಕೆ ದರ್ಶನ್ ನ್ನು ಹೈ ಸೆಕ್ಯೂರಿಟಿ ಸೆಲ್ ನಿಂದ ಕರೆ ತಂದು ಐಟಿ ಅಧಿಕಾರಿಗಳ ಎದುರು ಹಾಜರು ಪಡಿಸಲಾಯಿತು.

Exit mobile version