ಪಕ್ಷದ ಆರ್ಮಿಯಾಗಿ ಕೆಲಸ ಮಾಡುತಿದ್ದೇವೆ, ಪಕ್ಷ ಬೆಳೆಯಬೇಕು, ಪಕ್ಷ ಗಟ್ಟಿ ಆಗಬೇಕು, ಮುಂದಿನ ಭಾರಿಯೂ ಪಕ್ಷ ಅಧಿಕಾರಕ್ಕೆ ಬರಬೇಕು…
ಕೋಲಾರ: ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರಿಯುವ ವಿಚಾರ ನನ್ನ ವ್ಯಾಪ್ತಿಯಲ್ಲಿ ಬರೊಲ್ಲ ಎಂದು ಸಚಿವ ಸತೀಶ್ ಜಾರಕೀಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೆಪಿಸಿಸಿ ಅದ್ಯಕ್ಷ ಬದಲಾವಣೆ ಕುರಿತು ನಾನೆಲ್ಲೂ ಕೇಳಿಲ್ಲ, ಕೆಪಿಸಿಸಿ ಅದ್ಯಕ್ಷರ ಬದಲಾವಣೆ ಕುರಿತು ಸಚಿವ ರಾಜಣ್ಣ ಅವರನ್ನೇ ಕೇಳಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವರಿಷ್ಟರಿಗೆ ಸಂಭಧಿಸಿದ್ದು. ಮೈಸೂರಿನ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮವನ್ನು ಖಚಿತವಾಗಿ ತೆಗೆದುಕೊಳ್ಳುತ್ತೇವೆ. ಶೋಷಿತರ ಸಮಾವೇಶ ನಡೆಸುವ ಕುರಿತು ಮಾಹಿತಿ ಇಲ್ಲ, ಸಮಾವೇಶದ ಕುರಿತು ರಾಜಣ್ಣ ಜೊತೆ ಚರ್ಚೆ ಮಾಡುತ್ತೇನೆ, ನಾವು ಸಿದ್ದರಾಮಯ್ಯ ಅಥವ ಡಿ. ಕೆ. ಶಿವಕುಮಾರ್ ಆರ್ಮಿ ತರಹವಲ್ಲ, ಪಕ್ಷದ ಆರ್ಮಿಯಾಗಿ ಕೆಲಸ ಮಾಡುತಿದ್ದೇವೆ, ಪಕ್ಷ ಬೆಳೆಯಬೇಕು, ಪಕ್ಷ ಗಟ್ಟಿ ಆಗಬೇಕು, ಮುಂದಿನ ಭಾರಿಯೂ ಪಕ್ಷ ಅಧಿಕಾರಕ್ಕೆ ಬರಬೇಕು, ಇದಕ್ಕೆ ನಮ್ಮ ಕೆಲಸ, ನಾನು ಪಕ್ಷದ ಒಂದು ಪಾರ್ಟ್ ಅಷ್ಟೆ, ಇನ್ನು ನಾನು ೨೦೨೮ ಕ್ಕೆ ಮುಖ್ಯಮಂತ್ರಿ ಆಗುವ ವಿಚಾರ ಬಹಳ ದೂರ ಇದೆ ನೋಡನ, ಅದಕ್ಕೆ ಪಕ್ಷ ಸಂಘಟನೆ ಆಗಬೇಕು, ಅಧಿಕಾರಕ್ಕೆ ಬಂದ ಮೇಲೆ ಇದರ ಚರ್ಚೆ ಆಗಬೇಕು ಎಂದರು.