Home ಅಪರಾಧ ಫ್ಲೈಓವರ್ ಕಾಮಗಾರಿ ನಿರ್ಲಕ್ಷ್ಯ: ೧೧ ಜನರ‌ ಬಂಧನ

ಫ್ಲೈಓವರ್ ಕಾಮಗಾರಿ ನಿರ್ಲಕ್ಷ್ಯ: ೧೧ ಜನರ‌ ಬಂಧನ

0

ಹುಬ್ಬಳ್ಳಿ: ಫ್ಲೈಓವರ್ ಕಾಮಗಾರಿ ನಿರ್ಲಕ್ಷ್ಯದಿಂದ ಎಎಸ್ ಐ ನಾಭಿರಾಜ ಮೃತಪಟ್ಟ ಹಿನ್ನೆಲೆಯಲ್ಲಿ ಝಾಂಡು ಕನ್ಸಸ್ಟ್ರಕ್ಷನ್ ಕಂಪನಿಯ ೧೧ ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಎ.ಎಸ್.ಐ ನಾಭಿರಾಜ ಜಯಪಾಲ ದಯಣ್ಣವರ ಕರ್ತವ್ಯದ ನಿಮಿತ್ತ ತಮ್ಮ ಮೋಟಾರ್ ಸೈಕಲದಲ್ಲಿ ಹುಬ್ಬಳ್ಳಿ ಹಳೇ ಕೋರ್ಟ್ ಸರ್ಕಲದಲ್ಲಿ ಹೋಗುತ್ತಿದ್ದಾಗ ನಿರ್ಮಾಣ ಹಂತದಲ್ಲಿರುವ ಮೇಲ ಸೇತುವೆ (ಪ್ರೈಓವರ್‌ನ್ನು) ಕಾಮಗಾರಿಯನ್ನು ಮಾಡುತ್ತಿರುವ ಜಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದುದರಿಂದ ಸೇತುವೆ ಮೇಲಿನಿಂದ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಗುತ್ತಿಗೆ ಕಂಪನಿಯ ನೌಕರರಾದ ಹರ್ಷಾ ಹೊಸಗಾಣಿಗೇರ, ಜಿತೇಂದ್ರಪಾಲ ಶರ್ಮಾ, ಭೂಪೇಂದರ್ ಪಾಲ್, ಮೊಹಮ್ಮದ ಇಮಾದರೂ ಮಿಯಾ, ಅಸ್ಲಂ ಅಲಿ ಜಲೀಲಮಿಯಾ, ಮೊಹಮ್ಮದ ಮಸೂದರ ರೆಹಮಾನ್ ಹಾಜಿ, ಸಬೀಬ ಶೇಖ ಮನ್ಸೂರಾಲಿ, ರಿಜಾವುಲ್ ಹಕ್ ಮಂಜೂರಾಲಿ, ಶಮೀಮ ಶೇಖ ತಂದೆ ಪಿಂಟು ಶೇಖ್, ಮೊಹಮ್ಮದ ಆರೀಫ, ಮೊಹಮ್ಮದ ರಬಿವುಲ್ ಹಕ್ ಎಂಬುವರನ್ನು ಬಂಧಿಸಲಾಗಿದೆ.

Exit mobile version