Home ಅಪರಾಧ ಪ್ರೀತ್ಸೇ ಪ್ರಕರಣ, ಹುಡುಗಿ ತಾಯಿಗೆ ಚಾಕು ಇರಿದ ಯುವಕ

ಪ್ರೀತ್ಸೇ ಪ್ರಕರಣ, ಹುಡುಗಿ ತಾಯಿಗೆ ಚಾಕು ಇರಿದ ಯುವಕ

0

ಹುಬ್ಬಳ್ಳಿ: ಪ್ರೀತಿ, ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ ಇಬ್ಬರು ಯುವತಿಯರು ಚಾಕು ಇರಿತಕ್ಕೊಳ್ಳಗಾಗಿ ಮೃತಪಟ್ಟ ಪ್ರಕರಣ ಕೆಲ ತಿಂಗಳಾಗಿದ್ದು, ರಾಜ್ಯ, ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಈಗ ಮತ್ತೆ ಪ್ರೀತ್ಸೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನೋರ್ವ ತಾನು ಪ್ರೀತಿಸುತ್ತಿದ್ದ ಯುವತಿಯ ಮನೆಗೆ ನುಗ್ಗಿ ಆಕೆಯ ತಾಯಿಗೆ ಚಾಕು ಇರಿದ ಘಟನೆ ಬುಧವಾರ ಸಂಜೆ ನಗರದ ಲೋಹಿಯಾನಗರದಲ್ಲಿ ನಡೆದಿದೆ.
ಚಾಕು ಇರಿತಕ್ಕೊಳಗಾದ ಮಹಿಳೆ ನೀಲಾ ಹಡಪದ ಎಂಬುವವರಾಗಿದ್ದು, ಮಹೇಶ ಎಂಬ ೨೪ ವರ್ಷದ ಯುವಕ ಚಾಕು ಇರಿದ ಆರೋಪಿಯಾಗಿದ್ದಾನೆ. ಸಂಜೆ ನೀಲಾ ಅವರ ಮನೆಗೆ ನುಗ್ಗಿದ ಆರೋಪಿ ನೀಲಾ ಅವರ ಮನೆಯಲ್ಲಿದ್ದವರಿಗೆಲ್ಲ ಬೆದರಿಕೆ ಹಾಕಿದ್ದಾನೆ. ನೀಲಾ ಬುದ್ಧಿ ಹೇಳಿ ಮನೆಯಾಚೆ ಕಳಿಸುವ ವೇಳೆ ಅವರ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ನೀಲಾ ಅವರನ್ನು ಅಲ್ಲಿನ ಸುತ್ತಮುತ್ತಲಿನ ಜನರು, ಕುಟುಂಬದವರು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

Exit mobile version