ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಬ್ಬಳ್ಳಿ ಪ್ರವಾಸ ಮುಂದೂಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಕಲಬುರ್ಗಿಗೆ ಹೊರಡುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿ, ಮಾರ್ಚ್ 19 ಅಥವಾ 20ಕ್ಕೆ ಹುಬ್ಬಳ್ಳಿ ಪ್ರವಾಸ ಕೈಗೊಳ್ಳುವುದಿತ್ತು. ಆದರೆ, ಆ ದಿನಗಳಂದು ಬೇರೆ ರಾಜ್ಯಕ್ಕೆ ತೆರಳುವುದು ಪೂರ್ವನಿರ್ಧರಿತ ಆಗಿದೆ. ಹಾಗಾಗಿ ಹುಬ್ಬಳ್ಳಿ ಪ್ರವಾಸ ಮುಂದೂಡಲಾಗಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ಇಂದು ಕಲ್ಬುರ್ಗಿ ಪ್ರವಾಸ ಕೈಗೊಂಡಿದ್ದಾರೆ.18ಕ್ಕೆ ಶಿವಮೊಗ್ಗ ಪ್ರವಾಸವಿದೆ. ಎರಡನೇ ರಾಜ್ಯ ಪ್ರವಾಸ ಕೈಗೊಂಡ ವೇಳೆ ಹುಬ್ಬಳ್ಳಿ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಜಗದೀಶ ಶೆಟ್ಟರ ಅವರು ನಮ್ಮ ಹಿರಿಯ ನಾಯಕರು. ಬೆಳಗಾವಿ ಕ್ಷೇತ್ರದ ಟಿಕೆಟ್ ಅವರಿಗೆ ಸಿಕ್ಕಿರುವುದು ಸಂತೋಷವಾಗಿದೆ. ಅವರು ಅಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.