Home News ಪೊಲೀಸರ ಸೋಗಿನಲ್ಲಿ ಮಹಿಳೆಯರಿಗೆ ಹೆದರಿಸಿ ಹಣ ವಸೂಲಿ:  24 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು

ಪೊಲೀಸರ ಸೋಗಿನಲ್ಲಿ ಮಹಿಳೆಯರಿಗೆ ಹೆದರಿಸಿ ಹಣ ವಸೂಲಿ:  24 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು

ಬಂಧಿತ ಆರೋಪಿತರಿಂದ 6,52,000 ರೂ. ಮೌಲ್ಯದ ಸ್ವತ್ತು ವಶ

ದಾವಣಗೆರೆ: ಪೊಲೀಸರ ಸೋಗಿನಲ್ಲಿ ಮಹಿಳೆಯರಿಗೆ ಹೆದರಿಸಿ ಹಣ, ಬಂಗಾರ, ಮೊಬೈಲ್ ಎಗರಿಸುತ್ತಿದ್ದ ಆರೋಪಿಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿ 6.52 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಆಸೀಪ್, ಆರೀಫ್ ವುಲ್ಲಾ ಬಂಧಿತ ಆರೋಪಿಗಳು. ಮಹಿಳೆಯರಿಗೆ ಹೆದರಿಸಿ ಹಣ, ಆಭರಣಗಳನ್ನು ದೋಚುತ್ತಿದ್ದ ಬಗ್ಗೆ ಜೂ.9 ರಂದು ರಂಜಿತಾ ಚಂದ್ರಪ್ಪ  ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ಜಿ. ಮಂಜುನಾಥ ಹಾಗೂ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪಿಐ  ಸುರೇಶ ಸಗರಿ ನೇತೃತ್ವದಲ್ಲಿ ಪಿಎಸ್ಐ ಜಿ.ಎಸ್.ವಿಜಯ್, ಶ್ರೀಪತಿ ಗಿನ್ನಿ ಪಿ.ಎಸ್.ಐ, ಅಪರಾಧ ವಿಭಾಗ ಸಿಬ್ಬಂದಿ ನಾಗರಾಜ ಸುಣಗಾರ, ತಿಪ್ಪೆಸ್ವಾಮಿ.ಕೆ.ಎಲ್, ಸಿದ್ದೇಶ.ಹೆಚ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ರವಿನಾಯ್ಕ, ಶಾಂತರಾಜ್.ಎಂ.ಎಸ್, ಚಮನ್ ಸಾಬ್, ರವಿ.ಕೆ, ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಮಚಂದ್ರ ಜಾದವ್, ಶಿವಕುಮಾರ, ರಮೇಶ  ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ 6,00,000 ರೂ. ಬೆಲೆಯ ಕಾರು,  30,000 ರೂ. ವಿವಿಧ ಕಂಪನಿಯ ನಾಲ್ಕು ಮೊಬೈಲ್,  12000 ರೂ. ಬೆಲೆಯ 02 ಗ್ರಾಂ ತೂಕದ ಕಿವಿ ಓಲೆ  ಸೇರಿ ಒಟ್ಟು 6,52,000 ರೂ. ಬೆಲೆಯ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

Exit mobile version