Home ಅಪರಾಧ ಪೊಲೀಸರ ಮಿಂಚಿನ ಕಾರ್ಯಾಚರಣೆ : 3.50 ಕೋಟಿ ರೂ. ದೋಚಿ ಪರಾರಿಯಾದವರ ಸೆರೆ

ಪೊಲೀಸರ ಮಿಂಚಿನ ಕಾರ್ಯಾಚರಣೆ : 3.50 ಕೋಟಿ ರೂ. ದೋಚಿ ಪರಾರಿಯಾದವರ ಸೆರೆ

0

ಬಸವಕಲ್ಯಾಣ ತಾಲ್ಲೂಕು (ಬೀದರ್ ಜಿ) : ತಾಲ್ಲೂಕಿನ ಹಣಮಂತವಾಡಿ ಗ್ರಾಮದ ಬಳಿ ಕಳೆದ ರಾತ್ರಿ ಪಿಸ್ತುಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದಲ್ಲದೆ ಓರ್ವನ ಹಣೆಗೆ ಪಿಸ್ತುಲ್ ಇರಿಸಿ ಬೆದರಿಸಿ ಅವರಲ್ಲಿದ್ದ 3.50 ಕೋಟಿ ರೂ. ಗಳನ್ನು ಕಸಿದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಗುಂಡುರೆಡ್ಡಿ ಮತ್ತು ಇವನ ಸಹಚರರಾದ ವಿಜಯಕುಮಾರ್ ರೆಡ್ಡಿ ಮತ್ತು ಸಂಜಯ್ ರೆಡ್ಡಿ ಎನ್ನುವ ಮೂವರನ್ನು ವಶಕ್ಕೆ ಪಡೆದು 2.62 ಕೋಟಿ ರೂ. ಗಳನ್ನು ಮತ್ತು ದುಷ್ಕರ್ತ್ಯಕ್ಕೆ ಬಳಸಿದ ಪಿಸ್ತುಲ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.

Exit mobile version