Home ನಮ್ಮ ಜಿಲ್ಲೆ ಪೂಜೆಗೆ ಆಗಮಿಸಿದ ಪ್ರತಾಪ್ ಸಿಂಹಗೆ ಘೇರಾವ್

ಪೂಜೆಗೆ ಆಗಮಿಸಿದ ಪ್ರತಾಪ್ ಸಿಂಹಗೆ ಘೇರಾವ್

0

ಮೈಸೂರು: ಹಾರೋಹಳ್ಳಿ ಮತ್ತು ಗುಜ್ಜೇಗೌಡನಪುರ ಗ್ರಾಮಸ್ಥರು ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಕೆಲ ಸ್ಥಳೀಯರು ಘೇರಾವ್ ಹಾಕಿ ದಲಿತ ವಿರೋಧಿ ಎಂದು ಕರೆದು ಪೂಜೆಗೆ ಅವಕಾಶ ಕಲ್ಪಿಸದೆ ವಾಪಸ್ ಕಳುಹಿಸಿದ ಘಟನೆ ಮೈಸೂರು ತಾಲೂಕು ಹಾರೋಹಳ್ಳಿಯಲ್ಲಿ ನಡೆದಿದೆ. ರಾಮಲಲ್ಲಾ ವಿಗ್ರಹ ಕೆತ್ತನೆಗೆ ಕಲ್ಲು ತೆಗೆದ ಸ್ಥಳದಲ್ಲಿ ಹಾರೋಹಳ್ಳಿ ಮತ್ತು ಗುಜ್ಜೇಗೌಡನಪುರ ಗ್ರಾಮಸ್ಥರು ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ವಿರೋಧಿ ಘೋಷಣೆ ಕೂಗಿ ಘೇರಾವ್ ಹಾಕಿದ್ದಾರೆ.

Exit mobile version