Home News ಪುಷ್ಕರಿಣಿಯಲ್ಲಿ ಮುಳುಗಿ ಬಾಲಕ ಸಾವು

ಪುಷ್ಕರಿಣಿಯಲ್ಲಿ ಮುಳುಗಿ ಬಾಲಕ ಸಾವು

ಮುಳಬಾಗಿಲು: ಕುರುಡುಮಲೆ ಗಣಪತಿ ದೇವಾಲಯಕ್ಕೆ ಬಂದಿದ್ದ‌‌ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಲಕಟ್ಟದ ಮಂಜುನಾಥ ಎಂಬುವರ ಮಗ ಕುಶಾಲ್ (9) ಭಾನುವಾರ ಬೆಳಿಗ್ಗೆ ದೇವಾಲಯ ಆವರಣದ ಪುಷ್ಕರಿಣಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಕುಟುಂಬ ಸಮೇತ ಬಂದಿದ್ದಾಗ ಪೋಷಕರು ದೇವರ ದರ್ಶನಕ್ಕೆ ಹೋಗಿದ್ದ ವೇಳೆ ಕುಶಾಲ್ ಆಟವಾಡುತ್ತಿದ್ದ ವೇಳೆ 8 ಅಡಿ ನೀರು ಇರುವ ಪುಷ್ಕರಿಣಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಮುಳಬಾಗಿಲು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

Exit mobile version