Home ತಾಜಾ ಸುದ್ದಿ ಪಿಡಿಒ ಪರೀಕ್ಷೆಯಲ್ಲಿ  ಯಡವಟ್ಟು: 24 ಅಭ್ಯರ್ಥಿಗಳು,  12 ಪ್ರಶ್ನೆ ಪತ್ರಿಕೆ

ಪಿಡಿಒ ಪರೀಕ್ಷೆಯಲ್ಲಿ  ಯಡವಟ್ಟು: 24 ಅಭ್ಯರ್ಥಿಗಳು,  12 ಪ್ರಶ್ನೆ ಪತ್ರಿಕೆ

0

ರಾಯಚೂರು: ಪಿಡಿಒ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪರೀಕ್ಷೆ ಬರೆಯದೆ ಪ್ರತಿಭಟನೆ ನಡೆಸಿದ ಘಟನೆ ಸಿಂಧನೂರಿನ ಸರಕಾರಿ ಮಹಾವಿದ್ಯಾಲಯ ನಡೆದಿದೆ.

ಒಂದು ಕೋಣೆಗೆ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಕೇವಲ 12 ಪ್ರಶ್ನೆ ಪ್ರತಿಕೆಗಳನ್ನು ಮಾತ್ರ ಕೆಪಿಎಸ್ ಸಿ ಕಳುಹಿಸಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಅನುಮಾನ ಇರುವುದಾಗಿ ಆರೋಪಿಸಿ ಕೆಲವರು ಪರೀಕ್ಷೆ ಹಾಲ್ ನಿಂದ ಹೊರ ನಡೆದರು. ಬೀದರ್, ಕಲಬುರಗಿ ಹಾಗೂ ಯಾದಗಿರಿಯಿಂದ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 840ಕ್ಕೂ ಅಧಿಕ ಅಭ್ಯರ್ಥಿಗಳು ಪ್ರತಿಭಟನೆ ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಮುಂದಿನ ಕುಷ್ಟಗಿ – ಸಿಂಧನೂರು ರಸ್ತೆ ಬಂದ್ ಮಾಡಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. 

Exit mobile version