Home News ಪಹಲ್ಗಾಮ್‌ ಉಗ್ರರ ದಾಳಿ: ಅಂತಾರಾಷ್ಟ್ರೀಯ ಏಜೆನ್ಸಿ ಮೂಲಕ ತನಿಖೆ ಆಗಬೇಕು

ಪಹಲ್ಗಾಮ್‌ ಉಗ್ರರ ದಾಳಿ: ಅಂತಾರಾಷ್ಟ್ರೀಯ ಏಜೆನ್ಸಿ ಮೂಲಕ ತನಿಖೆ ಆಗಬೇಕು

ಮೈಸೂರು: ಹಿಂದೂ, ಮುಸ್ಲಿಮರ ನಡುವೆ ಕಂದಕ ಉಂಟು ಮಾಡಿ ಚುನಾವಣೆ ಗೆಲ್ಲುವುದೇ ಬಿಜೆಪಿಯ ಉದ್ದೇಶ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್‌ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಹಲ್ಗಾಮ್‌ನಲ್ಲಿ ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ. ಸುಮ್ಮನೆ ಮುಸ್ಲಿಮರು, ಮುಸ್ಲಿಮರು ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ, ಪಹಲ್ಲಾಮ್‌ನಲ್ಲಿ ಮುಸ್ಲಿಮರೇ ಬಹಳಷ್ಟು ಜನರನ್ನು ಕಾಪಾಡಿದ್ದಾರೆ. ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ. ಮುಸ್ಲಿಮರ ನಡುವೆ ಕಂದಕ ಉಂಟು ಮಾಡಿ ಚುನಾವಣೆ ಗೆಲ್ಲುವುದೇ ಬಿಜೆಪಿಯ ಉದ್ದೇಶ. ಮುಸ್ಲಿಮರೆಲ್ಲಾ ಭಯೋತ್ಪಾದಕರು ಎಂದು ಬಿಂಬಿಸುವ ಕೆಲಸ ಶುರುವಾಗಿದೆ, ಘಟನೆ ನಡೆದ ದಿನ ಅಲ್ಲಿ ಸೇನೆ ಮತ್ತು ಪೊಲೀಸ್ ಯಾಕೆ ಇರಲಿಲ್ಲ. ಇದರ ಹಿಂದೆ ಬೇರೆ ಏನೋ ಉದ್ದೇಶವಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಏಜೆನ್ಸಿ ಮೂಲಕ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

Exit mobile version