Home ತಾಜಾ ಸುದ್ದಿ ಪಠ್ಯ ವಿವಾದದ ಹಿನ್ನೆಲೆ: ಪ್ರಶಸ್ತಿ ಸ್ವೀಕರಿಸದೇ ಹಿಂದಿರುಗಿದ ಡಾ. ಕಂಬಾರ

ಪಠ್ಯ ವಿವಾದದ ಹಿನ್ನೆಲೆ: ಪ್ರಶಸ್ತಿ ಸ್ವೀಕರಿಸದೇ ಹಿಂದಿರುಗಿದ ಡಾ. ಕಂಬಾರ

0

ಪಠ್ಯ ವಿವಾದದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಭಯ: ಪ್ರಶಸ್ತಿ ಸ್ವೀಕರಿಸದೇ ಹಿಂದಿರುಗಿದ ಡಾ. ಕಂಬಾರ

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ‌ ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಾಡುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ಧಾಗಿದ್ದು, ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದ ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಇನ್ನಿಬ್ಬರು ಗಣ್ಯರು ಪ್ರಶಸ್ತಿ ಪಡೆಯದೇ ಹಿಂದಿರುಗಿದ್ದಾರೆ.
ಬುಧವಾರ ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಕವಿವಿ ವತಿಯಿಂದ ಅರಿವೇ ಗುರು ಪ್ರಶಸ್ತಿ ಪ್ರದಾನ ಮಾಡಲು ಕಾರ್ಯಕ್ರಮ ಆಯೋಜಿಸಿತ್ತು. ಅದಕ್ಕಾಗಿ ಡಾ. ಚಂದ್ರಶೇಖರ ಕಂಬಾರ, ಪ್ರೊ. ಎನ್.ಎಂ. ಬುಜುರ್ಕೆ ಮತ್ತು ಡಾ.‌ವಿ.ಜಿ.‌ತಳವಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿತ್ತು.
ಆದರೆ, ಇತ್ತೀಚೆಗೆ ವಿವಾದಿತ ಕೃತಿ ಬೆಳಗು ಚರ್ಚೆ ಹೆಚ್ಚಾಗಿದ್ದು, ಪ್ರಸಾರರಂಗ ವಿಭಾಗದ ಪ್ರೊ.‌ ಕೃಷ್ಣ ನಾಯಕ ಅವರೂ ವೇದಿಕೆ ಮೇಲೆ ಒರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳು ಮಂಗಳವಾರವೇ ಕುಲಸಚಿವರಿಗೆ ಮನವಿ ಸಲ್ಲಿಸಿದ್ದರು.
ಆದರೂ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಕ್ರಮ ನಡೆಸಲು ಕವಿವಿ ನಿರ್ಧರಿಸಿತ್ತು. ಇದಕ್ಕೆ ಜಗ್ಗದ ವಿದ್ಯಾರ್ಥಿಗಳು ಕಾರ್ಯಕ್ರಮ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲಿಯೇ ಕವಿವಿ ಕಾರ್ಯಕ್ರಮ ಮುಂದೂಡಿತು.
ಆದರೆ, ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದ ಅತಿಥಿಗಳು ಮಾತ್ರ ಪ್ರಶಸ್ತಿ ಪಡೆಯದೇ ಮರಳಿದ್ದು ಕವಿವಿ ಗೌರವಕ್ಕೆ ಧಕ್ಕೆ ಬಂದಂತಾಗಿದೆ.

Exit mobile version