Home ತಾಜಾ ಸುದ್ದಿ ನೇಣಿಗೆ ಶರಣಾದ ವಾಹನ ತರಬೇತುದಾರೆ

ನೇಣಿಗೆ ಶರಣಾದ ವಾಹನ ತರಬೇತುದಾರೆ

0

ಮೂಡುಬಿದಿರೆ: ಕಳೆದ 25 ವರ್ಷಗಳಿಂದ ವಾಹನ ತರಬೇತುದಾರೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡಂಗಲ್ಲು ಹುಡ್ಕೋ ಕಾಲನಿ ನಿವಾಸಿ ಬೆನ್ನಿ ಡಿಸೋಜ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂಡುಬಿದಿರೆಯ ಪ್ರಸಿದ್ಧ ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ನಲ್ಲಿ ಅವರು ವಾಹನ ತರಬೇತುದಾರೆಯಾಗಿದ್ದರು. ಪ್ರಾಂತ್ಯ ಹೈಸ್ಕೂಲ್ ನ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿರುವ ಪುತ್ರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version