Home ತಾಜಾ ಸುದ್ದಿ ನೆಲಕ್ಕುರುಳಿದ ಶೆಡ್ ೧,೫೦೦ ಕೋಳಿಗಳು ಸಾವು

ನೆಲಕ್ಕುರುಳಿದ ಶೆಡ್ ೧,೫೦೦ ಕೋಳಿಗಳು ಸಾವು

0

ವಿಟ್ಲ: ಭಾರೀ ಗಾಳಿ ಮಳೆಯಿಂದಾಗಿ ಕೋಳಿ ಸಾಕಣೆ ಶೆಡ್ ನೆಲಕ್ಕುರುಳಿದ ಪರಿಣಾಮ ಸುಮಾರು ಒಂದೂವರೆ ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ಜು. ೧೮ರ ತಡರಾತ್ರಿ ನಡೆದಿದೆ. ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಿಕತ್ವದ ಶೆಡ್ ಇದಾಗಿದ್ದು, ಸುಮಾರು ೨,೨೦೦ ಕೋಳಿ ಮರಿಗಳನ್ನು ಅವರು ಸಾಕುತ್ತಿದ್ದರು. ಈ ಪೈಕಿ ಬೆಳೆದಿದ್ದ ಸುಮಾರು ೭೦೦ ಕೋಳಿಗಳು ಮಾರಾಟವಾಗಿದ್ದವು. ಶೆಡ್ಡಿನ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ ಸುಮಾರು ೧೫೦೦ ಕೋಳಿಗಳು ಅದರಡಿಗೆ ಸಿಲುಕಿ ಸಾವನ್ನಪ್ಪಿವೆ. ಶೆಡ್ ಸಂಪೂರ್ಣ ಧ್ವಂಸಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ.

Exit mobile version