ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಕಾಣೆಯಾಗಿದ್ದ ದಾವಲ್ಸಾಬ್ ಆರು ವರ್ಷಗಳ ನಂತರ ಕುಟುಂಬದ ಮಡಿಲು ಸೇರಿದ್ದು, ಆರು ವರ್ಷಗಳ ನಂತರ ಮಗನ ಕಂಡ ಇಮಾಮ್ಹುಸೇನ ಭಾವುಕರಾಗಿದ್ದಾರೆ.
ಮಗನ ಕಳೆದುಕೊಂಡಿದ್ದ ಇಮಾಮ್ಹುಸೇನ ಮಗನಿಗಾಗಿ ಮುಂಬೈ ಸೇರಿದಂತೆ ವಿವಿಧ ಕಡೆ ಹುಡುಕಾಡಿದ್ದು, ಮಗ ಸಿಕ್ಕಿರಲಿಲ್ಲ. ಕೊನೆಗೆ ಮಂಗಳೂರಿನ ಸ್ನೇಹಾಲಯದಲ್ಲಿ ತಂದೆ ಮಗ ಸೇರುವ ಮೂಲಕ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ದಾವಲ್ಸಾಬ್ ಆರು ವರ್ಷ ನಾಲ್ಕು ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದನು. ಆತನಿಗಾಗಿ ಹುಡುಕಾಟ ನಡೆಸಿದ ಇಮಾಮ್ಹುಸೇನ್ಗೆ ಮೊಹರಂ ಹಬ್ಬದ ದಿನ ಸ್ನೇಹಾಲಯದಿಂದ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಮಗನನ್ನು ಕಂಡು ಭಾವುಕನಾಗಿದ್ದಾನೆ.
ಸ್ನೇಹಾಲಯದ ಜೋಸೆಫ್ ೨೦೧೯ ರಲ್ಲಿ ನವೆಂಬರ್ನಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಕನನ್ನು ನಮ್ಮ ಸ್ನೇಹಾಲಯಕ್ಕೆ ಸೇರಿಸಲಾಗಿತ್ತು. ಈತನ ಪಾಲಕರ ಪತ್ತೆಗಾಗಿ ಬಹಳಷ್ಟು ಹುಡುಕಾಟ ನಡೆಸಲಾಗಿತ್ತು. ನಂತರ ಆಧಾರ್ ಸೇವಾ ಕೇಂದ್ರದ ಕಾರ್ಯದಿಂದ ೩೬ ಜನರ ವಿಳಾಸ ದೊರೆಯಿತು. ಅದರಲ್ಲಿ ಬಬ್ಲು(ದಾವಲ್ಸಾಬ್) ನ ವಿಳಾಸ ದೊರೆಯಿತು.
ಕೂಡಲೇ ಕರೆ ಮಾಡಿ ಪಾಲಕರಿಗೆ ತಿಳಿಸಿದ್ದೆವು. ಅದರಂತೆ ತಂದೆ ಮಗ ಕೂಡಿದ್ದಾರೆ.
ಇಮಾಮ್ಹುಸೇನ ಮಾತನಾಡಿ, ತನ್ನ ಮಗ ಆರು ವರ್ಷದ ಹಿಂದೆ ಕಾಣೆಯಾಗಿದ್ದನು. ಆತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದೆನು. ಆದರೆ ಸಿಕ್ಕಿರಲಿಲ್ಲ. ಸ್ನೇಹಾಲಯದಿಂದ ನನ್ನ ಮಗ ಮರಳಿ ಸಿಕ್ಕಿದ್ದಾನೆ. ಚೆನ್ನಾಗಿ ನೋಡಿಕೊಂಡಿದ್ದಾರೆ ಎಲ್ಲರಿಗೂ ಕೃತಜ್ಞತೆಗಳು ಎಂದರು.