Home ತಾಜಾ ಸುದ್ದಿ ನಾಯಕರು ಸೂಚನೆ ನೀಡಿದ್ರೆ ಖಂಡಿತ ಲೋಕಸಭೆಗೆ ಸ್ಪರ್ಧೆ

ನಾಯಕರು ಸೂಚನೆ ನೀಡಿದ್ರೆ ಖಂಡಿತ ಲೋಕಸಭೆಗೆ ಸ್ಪರ್ಧೆ

0

ಹುಬ್ಬಳ್ಳಿ: ಲೋಕಸಭೆ ಚುನಾವಣೆಯ ಸ್ಫರ್ಧೆ ವಿಚಾರವಾಗಿ ಇನ್ನೂ ಚೆರ್ಚೆಗಳು ನಡೆದಿಲ್ಲ. ಒಂದು ವೇಳೆ ರಾಷ್ಟ್ರೀಯ ನಾಯಕರು ಸೂಚನೆ ನೀಡಿದರೆ ಖಂಡಿತವಾಗಿಯೂ ಸ್ಫರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಈ ಬಗ್ಗೆ ಪಕ್ಷದ ವರಿಷ್ಠರು ಚರ್ಚೆ ಮಾಡಿಲ್ಲ. ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ನಾನು ಸ್ವಾಗತಿಸುತ್ತೇನೆ. ನನಗೆ ನೀಡಲಾಗುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದರು.

Exit mobile version