Home ನಮ್ಮ ಜಿಲ್ಲೆ ಕಲಬುರಗಿ ನಾಡ ಕಚೇರಿಗಳ ಮೇಲೆ ಲೋಕಾ ದಾಳಿ

ನಾಡ ಕಚೇರಿಗಳ ಮೇಲೆ ಲೋಕಾ ದಾಳಿ

0

ಕಲಬುರಗಿ: ಲೋಕಾಯುಕ್ತ ಅಧಿಕಾರಿಗಳು ಜಿಲ್ಲೆಯ ಒಂಬತ್ತು ನಾಡ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಕಲಬುರ್ಗಿ ಎಸ್ಪಿ ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ಒಟ್ಟು 9 ತಾಲೂಕಿನ ನಾಡ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ ಒಟ್ಟು ನಗದು 40,000 ರೂ. ದೊರೆತಿದೆ ಎಂದು ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ, ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಜನರ ಬಳಿ ನಾಡ ಕಚೇರಿ ಸಿಬ್ಬಂದಿ ಹಣ ಪಡೆದು ಕೆಲಸ ಮಾಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆ ದಾಳಿ ಮಾಡಿದ್ದಾರೆ.

Exit mobile version