Home ಅಪರಾಧ ನನ್ನ ಮೊಬೈಲ್ ಲೋಕೇಷನ್ ಸಂಗ್ರಹ: ಶಾಸಕರ ಆರೋಪ

ನನ್ನ ಮೊಬೈಲ್ ಲೋಕೇಷನ್ ಸಂಗ್ರಹ: ಶಾಸಕರ ಆರೋಪ

0

ರಾಯಚೂರು: ನನ್ನ ಮೊಬೈಲ್ ತಿಂಗಳಿಗೆ 70 ಬಾರಿ ಲೋಕೇಷನ್ ಸಂಗ್ರಹಿಸಲಾಗುತ್ತಿದೆ ಎಂದು ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಅಳಲು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಗರದ ಈಶ್ವರ ನಗರ ನಿವಾಸಿ ವೀರೇಶ ಎಂಬುವರು ಪೊಲೀಸರ ಥಳಿತದಿಂದ ಸಾವನ್ನಪ್ಪಿದ್ದಾರೆ ಎಂಬ ಆರೋಪಿಸಿ ನಗರದ ಶಾಸಕ ಡಾ. ಶಿವರಾಜ ಪಾಟೀಲ್ ಅವರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪಶ್ಚಿಮ ಪೊಲೀಸ ಠಾಣೆಯ ಸಿಪಿಐ ಹಾಗೂ ಪಿಎಸ್‌ಐ ಅಮಾನತುಗೊಳಿಸಲು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮುಂದೆ ಶಾಸಕರು. ತಿಂಗಳಲ್ಲಿ 70 ಸಾರಿ ನನ್ನ ಲೊಕೇಷನ್ ತೆಗೆಸುತ್ತಾರೆ. ಪೊಲೀಸ್ ಸ್ಟೇಷನ್‌ನಿಂದಲೇ ನನ್ನ ಲೊಕೇಷನ್ ತೆಗಿಸ್ತಾರೆ ನಿಮಗೆ ಇನ್ನೂ ಏನ್ ಗೊತ್ತಿಲ್ಲ. ಪೊಲೀಸ್ ಸ್ಟೇಷನ್‌ಗಳಿಗೆ ಹೋಗಿ ನನ್ನ ಲೊಕೇಷನ್ ತೆಗಿಸ್ತಾರೆ. ಇಂತಹ ಜನ ರಾಯಚೂರಿನಲ್ಲಿದ್ದಾರೆ, ಯಾಕೆ ತೆಗೆಸುತ್ತಾರೋ ಗೊತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅವಾಚ್ಯ ಶಬ್ದಗಳನ್ನ ಬಳಸಿ ಅಳಲು ತೋಡಿಕೊಂಡಿದ್ದಾರೆ. ಶಾಸಕರು ತಮ್ಮ ಮೊಬೈಲ್ ಲೊಕೇಷನ್ ತೆಗೆದು ಕೊಡ್ತಾರೆ ಅಂತ ಪೊಲೀಸರ ವಿರುದ್ದ ಆರೋಪಿಸಿರುವಂಥ ವಿಡಿಯೋ ವೈರಲ್ ಆಗಿದೆ.

Exit mobile version