Home ತಾಜಾ ಸುದ್ದಿ ದೇವರು ಒಳ್ಳೆಯದನ್ನೇ ಮಾಡುತ್ತಾನೆ ಹೊರತು ಕೆಟ್ಟದ್ದಲ್ಲ

ದೇವರು ಒಳ್ಳೆಯದನ್ನೇ ಮಾಡುತ್ತಾನೆ ಹೊರತು ಕೆಟ್ಟದ್ದಲ್ಲ

0

ಹುಬ್ಬಳ್ಳಿ : ಕಾಂಗ್ರೆಸ್ ಸೋಲಿಗೆ ಕೇರಳದಲ್ಲಿ ಭೈರವಿ ಯಾಗ ಮಾಡಿಸಲಾಗಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ದೇವರು ಒಳ್ಳೆಯದನ್ನು ಮಾಡುತ್ತಾನೆಯೇ ಹೊರತು ಕೆಟ್ಟದ್ದನ್ನಲ್ಲ ಎಂದು ವ್ಯಾಖ್ಯಾನಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ತಾವು ಗೆಲ್ಲಬೇಕೆಂದು ಪೂಜೆ, ಪುನಸ್ಕಾರ ಮಾಡುತ್ತಾರೆಯೇ ವಿನಃ ಮತ್ತೊಬ್ಬರು ನಾಶವಾಗಲಿ ಎಂದಲ್ಲ. ದೇವರು ಕೆಡುಕು ಮಾಡುವುದಾದರೆ ಯಾರೂ ದೇವರನ್ನು ಪೂಜಿಸುವುದಿಲ್ಲ. ಕಾಂಗ್ರೆಸ್ಸಿಗರಿಗೆ ಆ ಭಯ ಏಕೆ? ಎಂದು ಪ್ರಶ್ನಿಸಿದರು.

Exit mobile version