Home ನಮ್ಮ ಜಿಲ್ಲೆ ಚಿಕ್ಕಮಗಳೂರು ಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ರೈತನಿಂದ ಆತ್ಮಹತ್ಯೆಗೆ ಯತ್ನ

ಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ರೈತನಿಂದ ಆತ್ಮಹತ್ಯೆಗೆ ಯತ್ನ

0

ಚಿಕ್ಕಮಗಳೂರು: ನ್ಯಾಯಾಲ ಯದ ತೀರ್ಪುನಿಂದ ಅಸಮಾ ಧಾನಗೊಂಡ ರೈತರೊಬ್ಬರೂ ನ್ಯಾಯಾಲಯ ಆವರಣ ಸಮೀಪ ವಿಷ ಸೇವಿಸಿ ಆತ್ಯ ಹತ್ಯೆಗೆ ಯತ್ನಿಸಿದ ಘಟನೆ ಕಡೂರು ಪಟ್ಟಣದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಡೂರು ತಾಲೂಕು ಕಾರೇಹಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ (50) ಆತ್ಮಹತ್ಯೆಗೆ ಯತ್ನಿಸಿದ ರೈತ. ಜಮೀನಿನ ವಿಚಾರದ ವ್ಯಾಜ್ಯ ಕಡೂರು ಸಿವಿಲ್ ಕೋರ್ಟ್ ನಲ್ಲಿತ್ತು, ಪ್ರಕರಣದ ತೀರ್ಪು. ರೈತನ ವಿರುದ್ಧ ಬಂದಿತ್ತು.

ತೀರ್ಪುನ ವಿರುದ್ಧ ರೈತ ನ್ಯಾಯಾಲಯಕ್ಕೆ ಮೆಲ್ಮನವಿ ಸಲ್ಲಿಸಿದ್ದಾರು. ಕಡೂರು ಪಟ್ಟಣದ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆದಿದ್ದು, ತೀರ್ಪು ರೈತ ಮಲ್ಲಿಕಾರ್ಜುನ ವಿರುದ್ಧ ಬಂದಿತ್ತು, ಇದರಿಂದ ಅಸಮಾಧಾನಗೊಂಡ ರೈತ ನನಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಆವರಣ ಸಮೀಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ರೈತನನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹಾಸನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸ ಲಾಗಿದೆ. ಚಿಕಿತ್ಸೆ ಬಳಿಕ ರೈತ ಪ್ರಾಣಪಯದಿಂದ ಪಾರಾ ಗಿದ್ದಾರೆ ಎಂದು ತಿಳಿದು ಬಂದಿದೆ.

Exit mobile version