Home ನಮ್ಮ ಜಿಲ್ಲೆ ಉತ್ತರ ಕನ್ನಡ ದಲಿತ ಸಿಎಂ ಮಾಡಲು ಈಗ ಸಮಯವಲ್ಲ

ದಲಿತ ಸಿಎಂ ಮಾಡಲು ಈಗ ಸಮಯವಲ್ಲ

0

ಶಿರಸಿ: ರಾಜ್ಯದಲ್ಲಿ ದಲಿತ ಸಿ.ಎಂ ಮಾಡಲು ಈಗ ಸಮಯವಲ್ಲ. ಕಾಲ ಬಂದಾಗ ಆಗಲಿದೆ, ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅವರು ಶನಿವಾರ ಮಧ್ಯಾಹ್ನ ಶಿರಸಿಗೆ ವಿವಿಧ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಪಕ್ಷದ ಮೇಲೆ ಯಾವುದೇ ಅಸಮದಾನ ಇಲ್ಲ. ಬಿ.ಕೆ. ಹರಿಪ್ರಸಾದ್ ರವರನ್ನು ಪಕ್ಷ ಕಡಗಣನೆ ಮಾಡುವ ಪ್ರಶ್ನೆಯೇ ಇಲ್ಲ. ಅವರನ್ನು ಯಾರೂ ಕೆಳಗಿಳಿಸುವ ಪ್ರಶ್ನೆ ಇಲ್ಲ. ನಾವು ಅವರ ಜೊತೆ ಚರ್ಚೆ ಮಾಡಿದ್ದೇವೆ. ಬಹಳಷ್ಟು ಹಿರಿಯ ನಾಯಕರಿಗೆ ಸ್ಥಾನ ನೀಡಿಲ್ಲ. ಅವಕಾಶ ಬಂದಾಗ ಅವರಿಗೆ ಸ್ಥಾನಮಾನ ನೀಡುತ್ತಾರೆ. ನಿಗಮ ಮಂಡಳಿಗೆ ೨೫ ಜನ ಶಾಸಕರಿಗೆ ಸ್ಥಾನ ನೀಡುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಇನ್ನಷ್ಟು ಜನರಿಗೆ ನೀಡುತ್ತಾರೆ. ಎಲ್ಲರಿಗೂ ಸಮಾಧಾನ ಮಾಡಲು ಅವಕಾಶ ಇದೆ. ಅಸಮಧಾನ ಆಗುವ ಪ್ರಶ್ನೆ ಇಲ್ಲ ಎಂದರು.

Exit mobile version