Home ಅಪರಾಧ ಖೋಟಾ ನೋಟು ಪ್ರಕರಣ ಬಳ್ಳಾರಿಯಲ್ಲಿ ಓರ್ವ ವಶಕ್ಕೆ

ಖೋಟಾ ನೋಟು ಪ್ರಕರಣ ಬಳ್ಳಾರಿಯಲ್ಲಿ ಓರ್ವ ವಶಕ್ಕೆ

0

ಬಳ್ಳಾರಿ: ಖೋಟಾ ನೋಟು ಮುದ್ರಿಸುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ ರಾಷ್ಟ್ರದ ನಾಲ್ಕು ಕಡೆ ನಡೆಸಿದ ದಾಳಿಯ ಭಾಗವಾಗಿ ಬಳ್ಳಾರಿಯಲ್ಲಿಯೂ ದಾಳಿ ನಡೆದಿದೆ.
ಮಹೇಂದ್ರ ಎಂಬಾತ ಬಳ್ಳಾರಿಯ ರಾಮಾಂಜಿನೇಯ ನಗರ ನಿವಾಸಿ ಆಗಿದ್ದು ಆತನಿಂದ ಮುದ್ರಣ ಯಂತ್ರ ಮತ್ತು ೫೦೦ ನೋಟಿ ಮಾದರಿ ವಶಪಡಿಸಿಕೊಂಡಿದ್ದಾಗಿ ಎಸ್‌ಪಿ ತಿಳಿಸಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಲಗಳ ಪ್ರಕಾರ ಕಳೆದ ನವೆಂಬರ್‌ನಲ್ಲಿ ಬಳ್ಳಾರಿಯಲ್ಲಿಯೇ ದಾಖಲಾದ ದೂರಿನ ಸಂಖ್ಯೆ ಆರ್‌ಸಿ-೦೨/೨೦೨೩/ಎನ್‌ಐಎ/ಬಿಎಲ್‌ಆರ್ ಪ್ರಕಾರವೇ ಎನ್‌ಐಇ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಳಿಯ ವೇಳೆ ಬಳ್ಳಾರಿ ನಗರದ ಆರೋಪಿ ಮಹೇಂದ್ರ ಅವರ ಬಳಿ ಖೋಟಾ ನೋಟು ಮುದ್ರಿಸಲು ಬಳಸಿದ ಮುದ್ರಣ ಯಂತ್ರ ಪತ್ತೆ ಆಗಿದೆ ಎಂದು ತಿಳಿದಿದೆ.

Exit mobile version