Home ತಾಜಾ ಸುದ್ದಿ ದರ್ಶನ್ ಸೆಲ್‌ಗೆ ಮೆಡಿಕಲ್ ಬೆಡ್, ದಿಂಬು

ದರ್ಶನ್ ಸೆಲ್‌ಗೆ ಮೆಡಿಕಲ್ ಬೆಡ್, ದಿಂಬು

0

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಇರುವ ಹೈ ಸೆಕ್ಯೂರಿಟಿ ಸೆಲ್‌ಗೆ ಮೆಡಿಕಲ್ ಬೆಡ್, ದಿಂಬು ಹಾಗೂ ಚೇರ್ ಪೂರೈಕೆ ಮಾಡಲಾಗಿದೆ.
ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲಿತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನರ ರೋಗ ಮತ್ತು ಆರ್ಥೋ ವಿಭಾಗದ ತಜ್ಞ ವೈದ್ಯರು ಭೇಟಿ ನೀಡಿ ದರ್ಶನ್ ಆರೋಗ್ಯ ಪರಿಶೀಲಿಸಿದ್ದರು. ಬಿಮ್ಸ್ ನಿರ್ದೇಶಕರ ಮೂಲಕ ದರ್ಶನ್ ವೈದ್ಯಕೀಯ ವರದಿಯನ್ನು ಜೈಲಾಧಿಕಾರಿಗಳಿಗೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಗುರುವಾರ ದರ್ಶನ್‌ಗೆ ಬೆನ್ನು ನೋವಿನ ನಿವಾರಣೆಗೆ ಮೆಡಿಕಲ್ ಸಲಕರಣೆಗಳನ್ನು ಪೂರೈಸಲಾಗಿದೆ. ಜಿಲ್ಲಾ ಆಸ್ಪತ್ರೆಯಿಂದ ಅಂಬ್ಯುಲೆನ್ಸ್‌ನಲ್ಲಿ ಜೈಲಿಗೆ ಮೆಡಿಕಲ್ ಸಲಕರಣೆ ಶಿಫ್ಟ್ ಮಾಡಿ, ದರ್ಶನ್ ಇರುವ ಹೈ ಸೆಕ್ಯೂರಿಟಿ ಸೆಲ್‌ಗೆ ನೀಡಲಾಯಿತು.

Exit mobile version