Home ತಾಜಾ ಸುದ್ದಿ ತುಳಸಿಗೇರಿಯ ಹನುಮಂತ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ

ತುಳಸಿಗೇರಿಯ ಹನುಮಂತ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ

0

ಕಲಾದಗಿ: ಹನುಮ ಜಯಂತಿಯಾದ ಇಂದು ಪ್ರಖ್ಯಾತ ಪವಮಾನ ಕ್ಷೇತ್ರವಾದ ಸಮೀಪದ ತುಳಸಿಗೇರಿಯ ಹನುಮಂತದೇವರ ದೇವಸ್ಥಾನದಲ್ಲಿ ವಿವಿಧ ಪೂಜೆಗಳೊಂದಿಗೆ ಹನುಮಂತದೇವರ ತೊಟ್ಟಿಲೋತ್ಸವ ವನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.
ಮುಂಜಾನೆ ಹನುಮಂತದೇವರಿಗೆ ವಿಶೇಷ ಪೂಜೆ ನೆರವೇರಿಸಿದ ಪೂಜಾರ ಬಂಧುಗಳು ತದನಂತರ ಮುಂಜಾನೆ ೬.೧೦ ಕ್ಕೆ ಹನುಮಂತದೇವರ ತೊಟ್ಟಿಲೋತ್ಸವವನ್ನು ನೆರವೇರಿಸಿದರು.
ಈ ಸಂಧರ್ಭದಲ್ಲಿ ಭಕ್ತರಿಂದ ಪಾನಕ ಹಾಗು ಕೊಸಂಬರಿ ವಿತರಣೆ ನಡೆಯಿತು.
ಹನಮಜಯಂತಿ ಹಿನ್ನಲೆಯಲ್ಲಿ ಜಿಲ್ಲೆ ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಹ‌ನುಮಂತ ದೇವರ ದರ್ಶನ ಪಡೆದು ಧನ್ಯತೆ ಪಡೆದರು.

Exit mobile version