Home ತಾಜಾ ಸುದ್ದಿ ತುಂಬಿದ ಮನೆ ನಿರ್ದೇಶಿಸಿದ್ದ ಎಸ್ ಉಮೇಶ್ ಇನ್ನಿಲ್ಲ

ತುಂಬಿದ ಮನೆ ನಿರ್ದೇಶಿಸಿದ್ದ ಎಸ್ ಉಮೇಶ್ ಇನ್ನಿಲ್ಲ

0

ಬೆಂಗಳೂರು: ತುಂಬಿದ ಮನೆ ನಿರ್ದೇಶಿಸಿದ್ದ ಎಸ್ ಉಮೇಶ್ ಇಂದು ನಿಧನ ಹೊಂದಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ ಎಸ್ ಉಮೇಶ್ ಅವರ ಅಂತ್ಯಕ್ರಿಯೆಯನ್ನು ಇಂದು ಬನಶಂಕರಿಯ ಚಿತಾಗಾರದಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬದವರು ಮಾಹಿತಿ ಹಂಚಿಕೊಂಡಿದ್ದಾರೆ.
ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’,‌ ‘ರಾಜ ಕೆಂಪು ರೋಜಾ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕಳೆದ ಕೆಲ ವರ್ಷಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಅವರನ್ನು ಕಾಡುತ್ತಿತ್ತು. 1973 ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಎಸ್ ಉಮೇಶ್, ಸಹಾಯಕ ನಿರ್ದೇಶಕ, ಸಂಕಲನಕಾರನಾಗಿ ಹಲವು ವರ್ಷ ಕೆಲಸ ಮಾಡಿದ್ದರು. ನಂತರ 1988 ರಲ್ಲಿ ಕಾಶಿನಾಥ್, ಭವ್ಯ ನಟನೆಯ ‘ಅವಳೇ ನನ್ನ ಹೆಂಡ್ತಿ’ ಸಿನಿಮಾ ಮೂಲಕ ನಿರ್ದೇಶಕನಾದರು. ಮೊದಲ ಸಿನಿಮಾ ಸೂಪರ್ ಹಿಟ್ ಆಗಿದ್ದು, ತಮಿಳು, ತೆಲುಗು, ಹಿಂದಿಗೆ ರಿಮೇಕ್ ಆಯಿತು. ಕಾಶಿನಾಥ್ ನಟನೆಯ ‘ಅವಳೇ ನನ್ ಹೆಂಡ್ತಿ’ ಚಿತ್ರಕ್ಕೆ ನಿರ್ದೇಶನ ಮಾಡಿ ಎಸ್‌. ಉಮೇಶ್ ಅವರು ಖ್ಯಾತಿ ಗಳಿಸಿದ್ದರು. ನಂತರ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

Exit mobile version