Home ಅಪರಾಧ ತಾಯಿಯ ಸಾವಿನ ಸುದ್ದಿ ತಿಳಿದು ಮಗ ಆತ್ಮಹತ್ಯೆ

ತಾಯಿಯ ಸಾವಿನ ಸುದ್ದಿ ತಿಳಿದು ಮಗ ಆತ್ಮಹತ್ಯೆ

0

ಮಳವಳ್ಳಿ: ಎರಡು ದಿನಗಳ ಹಿಂದ ಮೈಕ್ರೋ ಫೈನಾನ್ಸ್ ಹಾವಳಿಗೆ ಹೆದರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು ಈ ಬೆನ್ನಲ್ಲೇ ಮಗನು ಕೂಡ ಕೆರೆಗೆ ಹಾರಿ ಸಾವನಪ್ಪಿದ್ದಾನೆ.
ತಾಲೂಕಿನ ಹಲಗೂರು ಸಮೀಪದ ಕೊನ್ನಾಪುರ ಗ್ರಾಮದ ಪ್ರೇಮಾ ಎನ್ನುವವರು ಚನ್ನಪಟ್ಟಣ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಬ್ಯಾಂಕ್ ಸಿಬ್ಬಂದಿ ಮನೆಗೆ ಬೀಗ ಮುದ್ರೆ ಹಾಕಿದ ಕಾರಣದಿಂದ ಪ್ರೇಮಾ ಮಾತ್ರೆ ನುಂಗಿದ್ದರು.
ಮಂಡ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಕೊನೆಯುಸಿರೆಳೆದರು. ನಿಧನರಾದ ಸುದ್ದಿ ತಿಳಿದ ಪ್ರೇಮಾ ರವರ ಪುತ್ರ ರಂಜಿತ್ ಕೆ.ಎ(31) ತಾಯಿಯ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಳ್ಳದೆ ಕಾಣೆಯಾಗಿದ್ದ ರಂಜಿತನನ್ನು ಎರಡು ದಿನಗಳ ಕಾಲ ಹುಡುಕಾಡಿದ್ದರು. ಶನಿವಾರ ಬೆಳಿಗ್ಗೆ ಹಲಗೂರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು. ಮೈಕ್ರೋ ಫೈನಾನ್ಸ್ ಮೇಲೆ ಸರಿಯಾದ ಕ್ರಮ ಕೈಗೊಂಡು ನಮಗೆ ನ್ಯಾಯದ ದೊರಕಿಸಿಕೊಡಬೇಕು ಎಂದು ಪ್ರೇಮಾರವರ ಅಳಿಯ ಬೋರಪ್ಪ ಹೇಳಿದ್ದಾರೆ.
ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version