ವಾಡಿ: ವ್ಯಕ್ತಿಯೊಬ್ಬನ್ನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಪಂ ವ್ಯಾಪ್ತಿಯ ಚಾಮನೂರ ಗ್ರಾಮದ ಹತ್ತಿರ ಮಂಗಳವಾರ ಸಂಜೆ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.
ಚಾಮನೂರು ಗ್ರಾಮದ ನಿವಾಸಿ ಮರಲಿಂಗಪ್ಪ ತಳಗೇರಿ (67) ಕೊಲೆಯಾದ ವ್ಯಕ್ತಿಯಾಗಿದ್ದು, ಮಗ ಮರೆಪ್ಪ ತಳಗೇರಿ ಸಾವು ಬದುಕಿನ ಮಧ್ಯೆ ನರಳಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕೊಲೆಗೆ ಸಂಚು ರೂಪಿಸಿದ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಚಾಮನೂರು ಗ್ರಾಮದಿಂದ ತಂದೆ ಮಗ ಬೈಕ್ ಮೇಲೆ ವಾಡಿ ಪಟ್ಟಣಕ್ಕೆ ಬರುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ. ಕೊಲೆ ಆರೋಪಿಗಳು ತಲೆಮರಿಸಿಕೊಂಡಿದ್ದು, ಪೊಲೀಸ್ ರು ಜಾಲಬಸಿದ್ದಾರೆ.
ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿರುಗಾಡಿ, ವಾಡಿ ಠಾಣೆಯ ಪಿಎಸ್ಐ ತಿರುಮಲೇಶ ಕೆ. ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.