Home ನಮ್ಮ ಜಿಲ್ಲೆ ತಪ್ಪನ್ನು ಪ್ರತಿಭಟಿಸಿದವರ ವಿರುದ್ಧ ಮೊಕದ್ದಮೆ

ತಪ್ಪನ್ನು ಪ್ರತಿಭಟಿಸಿದವರ ವಿರುದ್ಧ ಮೊಕದ್ದಮೆ

0

ಬೆಂಗಳೂರು: ಹಿಂದೂ ಪರ ದನಿಯೆತ್ತುವವರನ್ನೇ ಗುರಿಯಾಗಿಸಿಕೊಂಡು ಕೇಸ್ ದಾಖಲಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿಯು ಜಗಜ್ಜಾಹೀರಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನ ಜೆರೋಸಾ ಶಾಲಾ ಶಿಕ್ಷಕಿ ವಿರುದ್ಧ ಧರ್ಮ ಅವಹೇಳನದ ಆರೋಪ ವಿಚಾರದಲ್ಲಿ ಬಿಜೆಪಿ ಶಾಸಕರ ಮೇಲೆ ಎಫ್‌ಐಆರ್ ದಾಖಲಿಸಿದ ಕ್ರಮ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ಪ್ರಭು ಶ್ರೀರಾಮನನ್ನು ಅವಮಾನ ಮಾಡಿದ ಮಂಗಳೂರಿನ ಸಂತ ಜೆರೋಸಾ ಶಾಲೆಯ ಶಿಕ್ಷಕಿಯರ ನಡೆಯನ್ನು ಖಂಡಿಸಿದ ಶಾಸಕರ ಮೇಲೆಯೇ ಸರ್ಕಾರ ಕೇಸ್ ದಾಖಲಿಸಿರುವುದು ಖಂಡನೀಯ.
ಕಾಂಗ್ರೆಸ್ಸಿನ ಹಿಂದೂ ವಿರೋಧಿ ಹಾಗೂ ಓಲೈಕೆ ರಾಜಕಾರಣ ಮಿತಿಮೀರಿದೆ. ನಮ್ಮ ಸರ್ಕಾರ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿದ್ದು ಒಂದೆಡೆಯಾದರೆ, ಹಿಂದೂ ಪರ ದನಿಯೆತ್ತುವವರನ್ನೇ ಗುರಿಯಾಗಿಸಿಕೊಂಡು ಕೇಸ್ ದಾಖಲಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿಯು ಜಗಜ್ಜಾಹೀರಾಗಿದೆ. ತಪ್ಪನ್ನು ಪ್ರತಿಭಟಿಸಿದ ನಮ್ಮ ಶಾಸಕ ವಿರುದ್ಧದ ಮೊಕದ್ದಮೆ ಹಿಂಪಡೆದು, ತಪ್ಪು ಮಾಡಿದ ಶಾಲೆಯ ವಿರುದ್ಧ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.

Exit mobile version