Home ತಾಜಾ ಸುದ್ದಿ ಡ್ರಗ್ಸ್ ಮುಕ್ತ ರಾಜ್ಯ ಮಾಡಿ

ಡ್ರಗ್ಸ್ ಮುಕ್ತ ರಾಜ್ಯ ಮಾಡಿ

0

ಬೆಳಗಾವಿ: ಗಾಂಜಾ ಹಾಗೂ ಡ್ರಗ್ಸ್ ಮುಕ್ತ ರಾಜ್ಯ ಮಾಡುವಂತೆ ಒತ್ತಾಯಿಸಿ ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟದ ವತಿಯಿಂದ ಸುವರ್ಣ ಗಾರ್ಡನಲ್ಲಿ ಪ್ರತಿಭಟನೆ ನಡೆಸಲಾಯಿತು.
ಯುವಕರನ್ನು ಗುರಿಯಾಗಿಸಿಕೊಂಡು ಪೊಲೀಸರ ಭಯವಿಲ್ಲದೆ ರಾಜ್ಯದಲ್ಲಿ ಯಥೇಚ್ಛವಾಗಿ ಗಾಂಜಾ ಮತ್ತು ಡ್ರಗ್ಸ್ ಮಾರಾಟ ದಂಧೆ ಪೆಡ್ಲರ್‌ಗಳ ಮುಖಾಂತರ ನಡೆಯುತ್ತಿದೆ. ಯಾರ ಭಯವಿಲ್ಲದೆ ಗಾಂಜಾ ಮತ್ತು ಡ್ರಗ್ಸ್ ದಂಧೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ, ಸರಕಾರ ಏಕೆ ಮೌನವಾಗಿದೆ ಎಂದು ಪ್ರಶ್ನೆ ಮಾಡಿದರು.
ಒಬ್ಬ ಮುಗ್ಧ ವಿದ್ಯಾರ್ಥಿಗೆ ಗಾಂಜಾ ಮತ್ತು ಡ್ರಗ್ಸ್ ಅನುಭವಿ ಹಾಗೂ ಬುದ್ದಿವಂತ ಪೊಲೀಸರಿಗೆ ಯಾಕೆ ಸಿಗುತ್ತಿಲ್ಲ. ಪೊಲೀಸ್ ಇಲಾಖೆ ಇಂತಹವರ ವಿರುದ್ಧ ಏಕೆ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟದ ರಾಜ್ಯ ಸಂಚಾಲಕ ವಿಜಯಕುಮಾರ ಕುಡಿಗನೂರ, ಸುಭಾಷ ಪಾಟೀಲ, ಜ್ಯೋತಿ ಶೆಟ್ಟಿ, ಚನ್ನು ಹೊಸಮನಿ, ಶಿವಬಸು ಪಾಟೀಲ, ಭರತ ಕುಲಕರ್ಣಿ, ಚೇತನ ಕಟ್ಟಿ ಉಪಸ್ಥಿತರಿದ್ದರು.

Exit mobile version