Home ತಾಜಾ ಸುದ್ದಿ ಡೆಂಗ್ಯೂ ಪ್ರಕರಣಗಳ ಸಾರ್ವಕಾಲಿಕ ದಾಖಲೆ

ಡೆಂಗ್ಯೂ ಪ್ರಕರಣಗಳ ಸಾರ್ವಕಾಲಿಕ ದಾಖಲೆ

0

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ೧೯, ೬೬೪ಕ್ಕೆ ಏರಿದ್ದು ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
೨೦೨೩ರಲ್ಲಿ ಕರ್ನಾಟಕದಲ್ಲಿ ೯,೩೧೩ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಹಿಂದಿಕ್ಕಿರುವ ಡೆಂಗ್ಯೂ ಸೊಳ್ಳೆಗಳು ೧೯,೬೬೪ ಮಂದಿಗೆ ಹಬ್ಬುವ ಮೂಲಕ ನೂತನ ದಾಖಲೆ ನಿರ್ಮಿಸಿವೆ. ಸಾವಿನ ಪ್ರಕರಣಗಳಲ್ಲಿ ಕಳೆದ ವರ್ಷದ ಅತ್ಯಧಿಕ ಹತ್ತು ಮಂದಿಯ ಸಂಖ್ಯೆಯನ್ನು ಈ ವರ್ಷ ಈಗಾಗಲೇ ಸಮಗಟ್ಟಿದೆ.ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ೧೨೧ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಹರಡುವಿಕೆಯ ಪ್ರಮಾಣ ಕ್ಷೀಣಿಸುತ್ತಿರುವುದು ಸಮಾಧಾನದ ಸಂಗತಿ. ಬೆಂಗಳೂರಿನಲ್ಲಿ ೪೧, ಕಲಬುರಗಿಯಲ್ಲಿ ೨೪ ಪ್ರಕರಣಗಳು ದೃಢಪಟ್ಟಿವೆ.

Exit mobile version