Home ತಾಜಾ ಸುದ್ದಿ ಡಿಐಜಿ ಅಜಯ್ ಹಿಲೋರಿ ಆಸ್ಪತ್ರೆಗೆ ದಾಖಲು

ಡಿಐಜಿ ಅಜಯ್ ಹಿಲೋರಿ ಆಸ್ಪತ್ರೆಗೆ ದಾಖಲು

0

ಬೀದ‌ರ್: ಕಲಬುರಗಿ ವಲಯ ಐಜಿಪಿ ಅಜಯ್ ಹಿಲೋರಿ ಅಧಿಕ ರಕ್ತದೊತ್ತಡದಿಂದ ನಗರದ ಖಾಸಗಿ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಶೇಷ ತಂಡದ ನೇತೃತ್ವ ವಹಿಸಿರುವ ಕಲಬುರಗಿ ಡಿಐಜಿ, ಹಿರಿಯ ಐಪಿಎಸ್ ಅಧಿಕಾರಿ ಅಜಯ್‌ ಹಿಲೋರಿ ದಿಢೀರ್ ಅಸ್ವಸ್ಥರಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬುಧವಾರ ರಾತ್ರಿ ಬೀದರ್ ನಗರದ ಮೋಹನ್ ಮಾರ್ಕೆಟ್ ಪ್ರದೇಶದಲ್ಲಿರುವ ಡಾ. ಗುದಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತಿಯಾದ ಸುತ್ತಾಟ, ಬಳಲಿಕೆಯಿಂದ ಹೀಗಾಗಿದೆ. ಸದ್ಯ ಹಿಲೋರಿ ಆರಾಮ ಇದ್ದು ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಮಾರ್ಟ್ ಆಗಲಿದ್ದಾರೆ ಎನ್ನಲಾಗಿದೆ.

ಎಸ್‌ಬಿಎಂ ಬ್ಯಾಂಕ್ ಎದುರು ಕಳೆದ ದಿ. 16ರಂದು ಇಬ್ಬರು ದುಷ್ಕರ್ಮಿಗಳು ಶೂಟೌಟ್‌ ಮಾಡಿ ಒಬ್ಬನ ಹತ್ಯೆ ಮಾಡಿದರೆ, ಇನ್ನೊಬ್ಬನಿಗೆ ಗಂಭೀರ ಗಾಯಗೊಳಿಸಿ 83 ಲಕ್ಷ ರೂ. ದೋಚಿ ಎಸ್ಕೆಪ್ ಆಗಿದ್ದಾರೆ. ಹಿಲೋರಿ ನೇತೃತ್ವದಲ್ಲಿ 8 ವಿಶೇಷ ತಂಡ ರಚಿಸಲಾಗಿದೆ. ಒಂದು ವಾರದಿಂದ ವಿವಿಧೆಡೆಗಳಲ್ಲಿ ಹಿಲೋರಿ ಸುತ್ತಾಡುತ್ತಿದ್ದಾರೆ.

Exit mobile version