Home ತಾಜಾ ಸುದ್ದಿ ಡಾ ರಾಜ್‌ಕುಮಾರ್ ಮೊಮ್ಮಗನ ಚಿತ್ರದ ಟ್ರೈಲರ್ ಬಿಡುಗಡೆ

ಡಾ ರಾಜ್‌ಕುಮಾರ್ ಮೊಮ್ಮಗನ ಚಿತ್ರದ ಟ್ರೈಲರ್ ಬಿಡುಗಡೆ

0

ಬೆಂಗಳೂರು: ಡಾ ರಾಜ್‌ಕುಮಾರ್ ಅವರ ಮೊಮ್ಮಗ ಷಣ್ಮುಖ ಅವರ ನಟನೆಯ ನಿಂಬಿಯಾ ಬನಾದ ಮ್ಯಾಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಲಕ್ಷ್ಮೀ ಗೋವಿಂದರಾಜ್ ಅವರ ಪುತ್ರ ಷಣ್ಮುಖ ಗೋವಿಂದರಾಜ್ ಅಭಿನಯದ ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾಗೆ ಅಶೋಕ್‌ ಕಡಬ ನಿರ್ದೇಶನ ಮಾಡಿದ್ದಾರೆ. ಅಮ್ಮ- ಮಗನ ಭಾವನಾತ್ಮಕ ಕಥಾಹಂದರವನ್ನು ಹೊಂದಿರುವ ಈ ಸಿನಿಮಾದ ಕಥೆಯು ಮಲೆನಾಡು ಭಾಗದಲ್ಲಿ ನಡೆಯುತ್ತದೆ. ಸುನಾದ್ ರಾಜ್, ಸಂಗೀತ, ತನುಶ್ರೀ, ತ್ರಿಶಾ ಮುಗು ಸುರೇಶ್, ಪದ್ಮವಾಸಂತಿ ಮುಂತಾದವರು ಬಣ್ಣ ಹಚ್ಚಿರುವ ಈ ಸಿನಿಮಾದಲ್ಲಿ ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ಆರನ್ ಕಾರ್ತಿಕ್ ಸಂಗೀತ ನೀಡಿದ್ದು, ವಿ ಮಾದೇಶ್ ಅವರ ನಿರ್ಮಾಣವಿದೆ.

ನಿಂಬಿಯಾ ಬನಾದ ಮ್ಯಾಗ ಚಿತ್ರ ಇದೇ ಎಪ್ರಿಲ್‌ 4 ರಂದು ತೆರೆಕಾಣಲಿದೆ…

Exit mobile version