Home News ಠಾಣೆಯಲ್ಲಿಯೇ ಕಾನಸ್ಟೇಬಲ್ ಮೊಬೈಲ್ ಎಗರಿಸಿದ ಕಳ್ಳ

ಠಾಣೆಯಲ್ಲಿಯೇ ಕಾನಸ್ಟೇಬಲ್ ಮೊಬೈಲ್ ಎಗರಿಸಿದ ಕಳ್ಳ

ಗದಗ: ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ನೆಪದಲ್ಲಿ ಬಂದ ಕಳ್ಳನೊಬ್ಬ ಮಹಿಳಾ ಕಾನಸ್ಟೇಬಲ್ ಒಬ್ಬರ ಮೊಬೈಲ್ ಎಗರಿಸಿರುವ ಘಟನೆ ನಡೆದಿದೆ.
ಮೊಬೈಲ್ ಎಗರಿಸಿರುವ ದೃಶ್ಯ ಪೊಲೀಸ್ ಠಾಣೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಿಸಿ ಟಿವಿಯಲ್ಲಿನ ದೃಶ್ಯ ಆಧರಿಸಿ ಶಹರ ಪೊಲೀಸರು ಕಾನಸ್ಟೇಬಲ್ ಮೊಬೈಲ್ ಎಗರಿಸಿದ ವ್ಯಕ್ತಿಯ ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಕಾನಸ್ಟೇಬಲ್‌ಗಳ ಮೊಬೈಲ್, ಹಣ ಮತ್ತಿತರ ವಸ್ತುಗಳಿಗೆ ರಕ್ಷಣೆಯಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಸಾರ್ವಜನಿಕರ ವಸ್ತುಗಳಿಗೆ ಹೇಗೆ ರಕ್ಷಣೆ ನೀಡುತ್ತಾರೆ ಎಂದು ಸಾರ್ವಜನಿಕರು ವ್ಯಂಗ್ಯವಾಡಿದ್ದಾರೆ.

Exit mobile version