Home ನಮ್ಮ ಜಿಲ್ಲೆ ಕಲಬುರಗಿ ಜಾಮೀನಿನ‌ ಮೇಲೆ ಬಿಡುಗಡೆಯಾದ ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ

ಜಾಮೀನಿನ‌ ಮೇಲೆ ಬಿಡುಗಡೆಯಾದ ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ

0

ಕಲಬುರಗಿ : ಕಲಬುರಗಿ ನಗರದ ಕೊಟನೂರ (ಡಿ) ಬಡಾವಣೆಯಲ್ಲಿ ಡಾ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಿಂದ ಬೆಲ್ ಮೇಲೆ ಬಂದ ಸಂಂಗಮೇಶ್ ಎಂಬ ಆರೋಪಿ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಕಳೆದ ರಾತ್ರಿ 12 : 50 ರ ಸುಮಾರಿಗೆ 60 ಜನರ ತಂಡದಿಂದ ದಾಳಿ ಮಾಡಲಾಗಿದೆ.

ಆರೋಪಿ ಕುಟುಂಬಸ್ಥರಿಗೆ ಅವ್ಯಾಚ್ಚ ಶಬ್ದಗಳಿಂದ ಬೈಯ್ದು ದಾಂಧಲೆ ಮಾಡಿದ್ದು, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಜಖಂಗೊಳಿಸಿದ್ದಾರೆ.

ಆರೋಪಿ ಮನೆಯಲ್ಲದೇ ಬಡಾವಣೆಯ ಸಿಕ್ಕ ಸಿಕ್ಕವರ ಮನೆ ಮೇಲೆ ದಾಳಿ ನಡೆಸಿದ್ದು, ಹಲವರಾರು ದ್ವಿಚಕ್ರ ವಾಹನ, ಕಾರುಗಳ ಗಾಜು ಪುಡಿಪುಡಿ ಮಾಡಲಾಗಿದೆ.

ಕಿಡಿಗೇಡಿಗಳ ದಾಳಿಗೆ ವೀರಶೈವ-ಲಿಂಗಾಯತ ಜನರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಲಬುರಗಿ ಬಂದ್‌ಗೆ ಕರೆ ಕೊಡಲಾಗುವುದು ಎಂದು ಜಿಲ್ಲಾಡಳಿತ ಮತ್ತುವ ಪೊಲೀಸ್ ಇಲಾಖೆಗೆ ವೀರಶೈವ ಲಿಂಗಾಯತ ಸಮಾಜದವರು ಎಚ್ಚರಿಕೆ ನೀಡಿದ್ದಾರೆ.

Exit mobile version