Home ತಾಜಾ ಸುದ್ದಿ ಜಾತಿಗಣತಿಗೆ ಮಹಾಸಭಾ ವಿರೋಧ

ಜಾತಿಗಣತಿಗೆ ಮಹಾಸಭಾ ವಿರೋಧ

0

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾದಿಂದ ನಾವು ಜಾತಿಗಣತಿಯನ್ನು ವಿರೋಧ ಮಾಡಿದ್ದೇವೆ ಎಂದು ಮಹಾಸಭಾದ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಂತೆ ಒಕ್ಕಲಿಗ ಸಮುದಾಯದಿಂದಲು ವಿರೋಧ ಮಾಡಿದ್ದಾರೆ. ಜಾತಿಗಣತಿ ಪುನರ್ ಪರಿಶೀಲನೆ ಮಾಡಬೇಕೆಂಬುದು ನಮ್ಮ ಅಚಲ ನಿಲುವು ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಏನಾದರು ಮಾತಾಡಲಿ ಅದು ನಮಗೆ ಸಂಬಂಧ ಇಲ್ಲ. ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದ ಶಾಮನೂರು ಹೇಳಿದರು.

Exit mobile version