Home ತಾಜಾ ಸುದ್ದಿ ಜನಾರ್ದನ ರೆಡ್ಡಿ ಪತ್ನಿ ವಿರುದ್ಧ FIR

ಜನಾರ್ದನ ರೆಡ್ಡಿ ಪತ್ನಿ ವಿರುದ್ಧ FIR

0

ಬಳ್ಳಾರಿ: ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಗಾಂಧಿ ನಗರ ಠಾಣೆಯಲ್ಲಿ ಗುರುವಾರ FIR ದಾಖಲಾಗಿದೆ. ಬಾವಿ ಶ್ರೀನಿವಾಸ್ ರಂಗ ರೆಡ್ಡಿ ಎಂಬುವವರು 2024ರ ಜ.8ರಂದು ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಅರುಣಾ ಲಕ್ಷ್ಮಿ ಅವರು ಬಳ್ಳಾರಿ ನಗರ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅಫಿಡವಿಟ್ ನಲ್ಲಿ ಅವರು ತಮ್ಮ ವಾಹನಗಳ ಮತ್ತು ಆಸ್ತಿಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಆರೋಪಿಸಲಾಗಿದೆ.

Exit mobile version