Home ಅಪರಾಧ ಚೂರಿಯಿಂದ ಇರಿದು ಸಹೋದರನ ಕೊಲೆ

ಚೂರಿಯಿಂದ ಇರಿದು ಸಹೋದರನ ಕೊಲೆ

0

ವಿಜಯನಗರ(ಹೊಳಲು): ಆಸ್ತಿ ವಿವಾದಕ್ಕಾಗಿ ತಮ್ಮನನ್ನೆ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಹೂವಿನಹಡಗಲಿ ತಾಲೂಕು ನಂದಿಗಾವಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ರಮೇಶ ಹನುಮಂತಪ್ಪ ಕಿನ್ನೂರಿ(೩೮) ಕೊಲೆಗೀಡಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಕಳೆದ ಏಳು ವರ್ಷದಿಂದ ಹಿರಿಯ ಅಣ್ಣ ಮಲ್ಲಪ್ಪನ ಜಮಿನನನ್ನು ಕಿರಿಯ ಸಹೋದರರು ಹತ್ತು ವರ್ಷದ ಕರಾರಿಗೆ ಲಾವಣಿ ಹಾಕಿಕೊಂಡಿದ್ದರು. ಆದರೆ ಇಂದು ಇನ್ನು ಮೂರು ವರ್ಷ ಅವಧಿ ಇರುವಾಗಲೇ ನನ್ನ ಹೊಲ ಬಿಟ್ಟುಕೊಡಿರೆಂದು ಹಿರಿಯ ಸಹೋದರ ಮಲ್ಲಪ್ಪ ತನ್ನ ತಮ್ಮಂದಿರ ಜೊತೆ ಜಗಳ ಮಾಡಿದ್ದಾನೆ. ಈ ನಡುವೆ ನಡೆದ ವಾಗ್ವಾದ, ಜಗಳ ವಿಕೋಪಕ್ಕೆ ಹೋಗಿ ಅಣ್ಣ ಮಲ್ಲಪ್ಪನು ತಮ್ಮ ರಮೇಶನ ಎಡ ಎದೆ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ. ಕುಸಿದು ಬಿದ್ದ ರಮೇಶನನ್ನು ಜೊತೆಯಲ್ಲೇ ಇದ್ದ ಚಮನಸಾಬ್ ಕೂಡಲೇ ಹೊಳಲು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಮಾರ್ಗ ಮಧ್ಯೆ ರಮೇಶ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಮಲ್ಲಪ್ಪನನ್ನು ಗ್ರಾಮಸ್ಥರು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version