Home ತಾಜಾ ಸುದ್ದಿ ಗ್ರಾಹಕರಿಗೆ ಮಾನಸಿಕ ಕಿರುಕುಳ ಫ್ಲಿಪ್‌ಕಾರ್ಟ್‌ಗೆ ೧೦ ಸಾವಿರ ದಂಡ

ಗ್ರಾಹಕರಿಗೆ ಮಾನಸಿಕ ಕಿರುಕುಳ ಫ್ಲಿಪ್‌ಕಾರ್ಟ್‌ಗೆ ೧೦ ಸಾವಿರ ದಂಡ

0

ಮುಂಬೈ: ನ್ಯಾಯೋಚಿತವಲ್ಲದ ವ್ಯವಹಾರ ಕ್ರಮ ಅನುಸರಿಸಿದ ಫ್ಲಿಪ್‌ಕಾರ್ಟ್ ಸಂಸ್ಥೆಗೆ ಗ್ರಾಹಕರ ನ್ಯಾಯಾಲಯ ಈಗ ಹತ್ತು ಸಾವಿರ ರೂ ದಂಡ ವಿಧಿಸಿದೆ. ದಾದರ್‌ನ ನಿವಾಸಿಯೊಬ್ಬರು ತನ್ನ ಕ್ರೆಡಿಟ್ ಕಾರ್ಡ್ ಬಳಸಿ ೨೦೨೨ರ ಜುಲೈ ೧೦ರಂದು ೩೯,೬೨೮ ರೂ. ಪಾವತಿಸಿ ಐಫೋನ್ ನೀಡುವಂತೆ ಫ್ಲಿಪ್‌ಕಾರ್ಟ್ಗೆ ಆದೇಶ ಕಳುಹಿಸಿದ್ದರು. ಅದರಂತೆ ಜುಲೈ ೧೨ರಂದು ಈ ಐಫೋನ್ ರವಾನೆಯಾಗಬೇಕಾಗಿತ್ತು. ಆದರೆ ಆರು ದಿನಗಳ ನಂತರ ಐಫೋನ್‌ಗೆ ಸೂಚಿಸಿದ ಆದೇಶ ರದ್ದಾಗಿದೆ ಎಂದು ಫ್ಲಿಪ್‌ಕಾರ್ಟ್ ಎಸ್‌ಎಂಎಸ್ ಸಂದೇಶ ರವಾನಿಸಿದೆ. ಈ ಬಗ್ಗೆ ಕಂಪನಿಯನ್ನು ಸಂಪರ್ಕಿಸಿದಾಗ ಡೆಲವರಿ ಬಾಯ್ ಹಲವಾರು ಬಾರಿ ದೂರವಾಣಿ ಕರೆ ಮಾಡಿದರೂ ಗ್ರಾಹಕರು ಸಂಪರ್ಕಕ್ಕೆ ಸಿಗದ ಕಾರಣ ಐಫೋನ್ ಆದೇಶ ರದ್ದುಪಡಿಸಲಾಗಿದೆ ಎಂದು ತಿಳಿಸಿದೆ. ಹೀಗಾಗಿ ಗ್ರಾಹಕರಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಕ್ಕಾಗಿ ಹತ್ತು ಸಾವಿರ ರೂ ದಂಡ ಪಾವತಿಸುವಂತೆ ಸೂಚಿಸಲಾಗಿದೆ..

Exit mobile version