Home ತಾಜಾ ಸುದ್ದಿ ಗ್ಯಾರಂಟಿ ಭಯದಿಂದ ಬಿಜೆಪಿ ಸರಕಾರ ಉರುಳಿಸಲು ಮುಂದಾಗಿದೆ

ಗ್ಯಾರಂಟಿ ಭಯದಿಂದ ಬಿಜೆಪಿ ಸರಕಾರ ಉರುಳಿಸಲು ಮುಂದಾಗಿದೆ

0

ಸುರತ್ಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಡ ಜನರಿಗಾಗಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ್ದು, ಐದು ವರ್ಷ ಪೂರ್ಣಗೊಳಿಸಿದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಾರದು ಎಂದು ತಿಳಿದು ಬಿಜೆಪಿ ಕುತಂತ್ರದಿಂದ ಸರಕಾರ ಉರುಳಿಸಲು ಮುಂದಾಗಿದೆ ಎಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಟೀಕಿಸಿದ್ದಾರೆ.
ಮತದಾರರು ಪೂರ್ಣಬೆಂಬಲ ನೀಡಿ ಅಧಿಕಾರಕ್ಕೆ ತಂದ ಸರಕಾರವನ್ನು ಬಿಜೆಪಿ ಅಸ್ಥಿರಗೊಳಿಸಿದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಹತ್ತು ಸೀಟು ಗಳಿಸುವುದೂ ಕಷ್ಟವಾಗಬಹುದು.
ಬಡವರ ಕಷ್ಟಗಳಿಗೆ ಸ್ಪಂದಿಸಿದ ಸರಕಾರ ಇದ್ದರೆ ಅದು ಸಿದ್ದರಾಮಯ್ಯ ಅವರ ಸರಕಾರ ಎಂಬುದು ಮತದಾರರಿಗೂ ಅರಿವಾಗಿದೆ. ಉಚ್ಚನ್ಯಾಯಾಲಯದಲ್ಲಿ ಸಿದ್ದರಾಮಯ್ಯ ತನಿಖೆ ಎದುರಿಸಿ ಆರೋಪ ಮುಕ್ತರಾಗಿ ಐದು ವರ್ಷ ಪೂರ್ಣಗೊಳಿಸಲಿದ್ದಾರೆ ಎಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version