ವಿಜಯಪುರ: ಗೌರಿ ಲಂಕೇಶ್ ಹತ್ಯೆ ಕೇಸ್ ಆರೋಪಿಗಳಿಗೆ ಸನ್ಮಾನ ಮಾಡಿರುವುದು ಅತ್ಯಂತ ಹೇಯ ಕೃತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಕೇಸ್ ಆರೋಪಿಗಳಿಗೆ ವಿಜಯಪುರದಲ್ಲಿ ಸನ್ಮಾನ ಮಾಡಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಎಂ.ಎಂ. ಕಲಬುರ್ಗಿ ಅವರು ನಮ್ಮ ಜಿಲ್ಲೆಯ ಒಬ್ಬ ಮೇಧಾವಿ, ಸಾಹಿತಿಯನ್ನು ಕೊಂದವರಿಗೆ ಇವರು ಸನ್ಮಾನ ಮಾಡಿರುವುದು ಇದೊಂದು ಹೇಯ ಕೃತ್ಯವಾಗಿದೆ ಎಂದಿದ್ದಾರೆ. ಯಾರು ಸ್ವಾಗತ ಮಾಡಿ ಸನ್ಮಾನ ಮಾಡಿದ್ದಾರೆ ಅವರು ಅರಿತುಕೊಳ್ಳಬೇಕು ಎಂದರು.
ಇನ್ನೂ ಸನ್ಮಾನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.